ADVERTISEMENT

Covid-19 India Update: ಕೇರಳದಲ್ಲಿ ಕೊರೊನಾ ಕೇಕೆ, ದೇಶದಲ್ಲಿ 46,164 ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 5:50 IST
Last Updated 26 ಆಗಸ್ಟ್ 2021, 5:50 IST
ಕೋವಿಡ್ ಪರೀಕ್ಷೆ: ಸಂಗ್ರಹ ಚಿತ್ರ
ಕೋವಿಡ್ ಪರೀಕ್ಷೆ: ಸಂಗ್ರಹ ಚಿತ್ರ   

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,33,725 ಕ್ಕೆ ಏರಿದೆ ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ ದೇಶದಾದ್ಯಂತ 607 ಮಂದಿ ಮೃತಪಟ್ಟಿದ್ದಾರೆ.

ಕೇರಳ ರಾಜ್ಯ ಒಂದರಲ್ಲೇ 31,445 ಹೊಸ ಪ್ರಕರಣ ಮತ್ತು 215 ಸಾವು ಸಂಭವಿಸಿರುವುದು ದೇಶದ ದೈನಂದಿನ ಕೋವಿಡ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ADVERTISEMENT

ಈ ಮೂಲಕ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,25,58,530ಕ್ಕೆ ಜಿಗಿದಿದ್ದು, ಮೃತರ ಒಟ್ಟು ಸಂಖ್ಯೆ 4,36,365 ರಷ್ಟಾಗಿದೆ.

ಸಕ್ರಿಯ ಪ್ರಕರಣಗಳ ಶೇಕಡವಾರು ಪ್ರಮಾಣ 1.03 ರಷ್ಟಿದ್ದರೆ, ಚೇತರಿಕೆ ಪ್ರಮಾಣ ಶೇಕಡಾ.97.63ರಷ್ಟಿದೆ.

ದೈನಂದಿನ ಕೋವಿಡ್ ಪಾಸಿಟಿವ್ ದರವು ಶೇ. 2.58ರಷ್ಟಿದ್ದು, ಕಳೆದ 31 ದಿನಗಳಿಂದ ಶೇಕಡಾ ಮೂರಕ್ಕಿಂತ ಕಡಿಮೆ ಇದೆ.

24 ಗಂಟೆಗಳಲ್ಲಿ 80,40,407 ಡೋಸ್ ಸೇರಿ ಈವರೆಗೆ ದೇಶದಲ್ಲಿ60,38,46,475 ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.