ADVERTISEMENT

ಮಂಗಳೂರು: ಅಕ್ರಮ ಚಿನ್ನ ಸಾಗಣೆ; ವ್ಯಕ್ತಿಯ ಬಂಧನ, 1.23 ಕೆ.ಜಿ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 10:27 IST
Last Updated 26 ಮಾರ್ಚ್ 2021, 10:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಆರೋಪಿಯಿಂದ 1.23 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳದ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಬಂಧಿತ ವ್ಯಕ್ತಿ. ದುಬೈನಿಂದ ಮಂಗಳೂರಿಗೆ ಬಂದ ಈತ ಘನರೂಪದ ಅಂಟಿನೊಂದಿಗೆ ಚಿನ್ನದ ಪುಡಿಯನ್ನು ಬೆರೆಸಿ, ಅದನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ. ಈ ವಸ್ತುವಿನ ಜತೆಗೆ, ಕಚ್ಚಾ ಸರಪಳಿಯ ರೂಪದಲ್ಲಿದ್ದ ಚಿನ್ನವನ್ನೂ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ADVERTISEMENT

ವಶಪಡಿಸಿಕೊಂಡಿರುವ ಒಟ್ಟು ಚಿನ್ನದ ಮೌಲ್ಯ ₹57.14 ಲಕ್ಷ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.