ADVERTISEMENT

ಗೂಗಲ್‌ ವಿಜ್ಞಾನ ಮೇಳ ರಾಜ್ಯದ ಯುವಕರಿಬ್ಬರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 17:47 IST
Last Updated 30 ಜುಲೈ 2019, 17:47 IST
   

ನವದೆಹಲಿ: ಬಿಂಬ್ಲಿ ಹಣ್ಣಿನ ರಸದಿಂದ ರಬ್ಬರ್‌ ಅನ್ನು ಹೆಪ್ಪುಗಟ್ಟಿಸುವಿಕೆಯ ಪರಿಸರ ಸ್ನೇಹಿ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಿದ ಕರ್ನಾಟಕದ ಇಬ್ಬರು ಯುವಕರು ಗೂಗಲ್‌ನ ‘ರಾಷ್ಟ್ರೀಯ ಜಿಯೋಗ್ರಾಫಿಕಲ್‌ ಎಕ್ಸ್‌ಪ್ಲೋರರ್‌ ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪಡೆದಿರುವಕೆ.ಎ.ಅಮನ್‌ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಎ.ಯು.ನಚಿಕೇತ್‌ ಕುಮಾರ್‌ ಅವರು ಬಿಂಬ್ಲಿ (ಅವೆರ್ಹೋವಾ– ವೈಜ್ಞಾನಿಕ ಹೆಸರು) ಹಣ್ಣಿನ ರಸ ಬಳಸಿ ಕಡಿಮೆ ಖರ್ಚಿನಲ್ಲಿ ರಬ್ಬರ್‌ ಅನ್ನು ಪರಿಣಾಮಕಾರಿಯಾಗಿ ಹೆಪ್ಪುಗಟ್ಟಿಸಿ, ಶೀಟ್‌ಗಳನ್ನು ತಯಾರಿಸಲು ಸಹಾಯಕವಾಗುವ ಪ್ರಕ್ರಿಯೆ ಅಭಿವೃದ್ಧಿಪಡಿಸಿದ್ದಾರೆ.

ಗೂಗಲ್‌ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಇವರಿಬ್ಬರೂ ಸೇರಿ ಆರು ಮಂದಿ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ವಿಭಾಗಗಳಲ್ಲಿ 14 ದೇಶಗಳ 24 ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.