ADVERTISEMENT

ಕುನಾಲ್‌ ವಿರುದ್ಧ ಎಫ್‌ಐಆರ್‌: ಮುಂಬೈ ಪೊಲೀಸರಿಗೆ ಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:19 IST
Last Updated 8 ಏಪ್ರಿಲ್ 2025, 14:19 IST
ಕುನಾಲ್‌ ಕಾಮ್ರಾ
ಕುನಾಲ್‌ ಕಾಮ್ರಾ   

ಮುಂಬೈ: ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ ರದ್ದು ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಿತು.

 ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಮುಂಬೈ ಪೊಲೀಸ್‌ ಮತ್ತು ಶಿವಸೇನಾ ಶಾಸಕ ಮುರ್ಜಿ ಪಟೇಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿತು.

ನಂತರ ನ್ಯಾಯಮೂರ್ತಿಗಳಾದ ಸಾರಂಗ್‌ ಕೊತ್ವಾಲ್‌ ಮತ್ತು ಎಸ್‌.ಎಂ.ಮೋದಕ್‌ ಅವರನ್ನು ಒಳಗೊಂಡ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 16ಕ್ಕೆ ಮುಂದೂಡಿತು.

ADVERTISEMENT

 ಕುನಾಲ್‌ ಅವರ ವಿರುದ್ಧ ಪಟೇಲ್‌ ದೂರು ನೀಡಿದ್ದರು. ನಂತರ ಮುಂಬೈ ಪೊಲೀಸರು ಕಾಮ್ರಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ವಿಚಾರಣೆಗೆ ಹಾಜರಾಗುವಂತೆ  ಕುನಾಲ್‌ ಅವರಿಗೆ  ಮುಂಬೈ ಪೊಲೀಸರು ಈವರೆಗೆ ಮೂರು ಬಾರಿ ಸಮನ್ಸ್ ನೀಡಿದ್ದಾರೆ. ಆದಾಗ್ಯೂ  ಅವರು ವಿಚಾರಣೆಗೆ ಹಾಜರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.