ADVERTISEMENT

ಕನ್ನಡ ಕಲಿತು ಡಿ.ಕೆ. ಸುರೇಶ್‌ಗೆ ಬಿಜೆಪಿ ಸೇರಿಕೊಳ್ಳಿ ಎಂದ ಲಡಾಖ್ ಸಂಸದ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 13:04 IST
Last Updated 3 ಮಾರ್ಚ್ 2020, 13:04 IST
ಲಡಾಖ್‌ನ ಸಂಸದ ಜಮ್‌ಯಾಂಗ್ ಟ್ಸೆರಿಂಗ್ ನಮ್‌ಯಾಂಗ್, ಸಂಸದರಾದ  ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಡಿ.ಕೆ. ಸುರೇಶ್
ಲಡಾಖ್‌ನ ಸಂಸದ ಜಮ್‌ಯಾಂಗ್ ಟ್ಸೆರಿಂಗ್ ನಮ್‌ಯಾಂಗ್, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಡಿ.ಕೆ. ಸುರೇಶ್    

ನವದೆಹಲಿ: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರಿಗೆ ಲಡಾಖ್‌ನ ಏಕೈಕ ಸಂಸದ ಜಮ್‌ಯಾಂಗ್ ಟ್ಸೆರಿಂಗ್ ನಮ್‌ಯಾಂಗ್ ಅವರು ಕನ್ನಡದಲ್ಲೇ 'ಬಿಜೆಪಿ ಸೇರಿಕೊಳ್ಳಿ' ಎಂದು ಹೇಳಿದ್ದಾರೆ.

ಲೋಕಸಭೆಯ ಅಧಿವೇಶನದಲ್ಲಿ ಪಾಲ್ಗೊಂಡಿರುವ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಡಿ.ಕೆ. ಸುರೇಶ್ ಅವರ ಜೊತೆಗೆ ಲಡಾಖ್ ಸಂಸದ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಅವರು ಹರಟುತ್ತಾ ಕುಳಿತಿದ್ದಾರೆ. ಈ ವೇಳೆ ನಂಗ್ಯಾಲ್ ಕಾಂಗ್ರೆಸ್ ಸಂಸದರಿಗೆ 'ಬಿಜೆಪಿ ಸೇರಿಕೊಳ್ಳಿ' ಎಂದು ಕಾಲೆಳೆದಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಸೆಲ್ಫಿ ಹಂಚಿಕೊಂಡಿರುವ ನಂಗ್ಯಾಲ್, 'ಮೂವರು ಕನ್ನಡಿಗರು ನನಗೆ ಕನ್ನಡ ಕಲಿಸಲು ಪ್ರಯತ್ನಿಸುತ್ತಿದ್ದ ವೇಳೆ ಡಿ.ಕೆ. ಸುರೇಶ್ ಅವರಿಗೆ ನಾನು ಬಿಜೆಪಿ ಸೇರಿಕೊಳ್ಳಿ ಎಂದು ಹೇಳಿದೆ' ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಜೊತೆ ನಾನು ಬಹಳ ಎಂಜಾಯ್ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡಿಗರು ಫುಲ್ ಖುಷ್ ಆಗಿ ರೀಪ್ಲೈ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.