ADVERTISEMENT

ಮಧ್ಯಪ್ರದೇಶ ರಾಜ್ಯಪಾಲ ಟಂಡನ್‌ ನಿಧನ

ಪಿಟಿಐ
Published 21 ಜುಲೈ 2020, 17:12 IST
Last Updated 21 ಜುಲೈ 2020, 17:12 IST
ಲಾಲ್‌ಜಿ ಟಂಡನ್‌
ಲಾಲ್‌ಜಿ ಟಂಡನ್‌   

ಲಖನೌ: ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್‌ (85) ಅವರು ಹೃದಯಾ ಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಅವರಿಗೆ ಪತ್ನಿ, ಉತ್ತರ ಪ್ರದೇಶ ಸಂಪುಟ ಸಚಿವ ಅಶುತೋಷ್‌ ಟಂಡನ್‌ ಸೇರಿದಂತೆ ಮೂವರು ಪುತ್ರರು ಇದ್ದಾರೆ.

ಮೃತರ ಗೌರವಾರ್ಥ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.