ADVERTISEMENT

ಗಡಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ; 2 ಪಿಸ್ತೂಲು, 52 ಪ್ಯಾಕೆಟ್ ಮಾದಕವಸ್ತು ವಶ

ಪಿಟಿಐ
Published 20 ಸೆಪ್ಟೆಂಬರ್ 2020, 6:27 IST
Last Updated 20 ಸೆಪ್ಟೆಂಬರ್ 2020, 6:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದ ಕಡೆಯಿಂದ ಒಳ ನುಸುಳುವ ಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ಸಿಬ್ಬಂದಿ, ಮಾದಕ ವಸ್ತುಗಳಿದ್ದ 58 ಪ್ಯಾಕೆಟ್ ಗಳು ಹಾಗೂ ಎರಡು ಪಿಸ್ತೂಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ಆರ್‌.ಎಸ್‌. ಪುರ ವಲಯದಲ್ಲಿ ಶಂಕಿತ ಕಳ್ಳಸಾಗಣೆದಾರರು ಶನಿವಾರ ಮಧ್ಯರಾತ್ರಿ ಒಳನುಸುಳಲು ಯತ್ನಿಸಿದ್ದರು. ಶಂಕಾಸ್ಪದವಾಗಿದ್ದ ಕೆಲವರ ಚಲನವಲನ ಗಮನಿಸಿದ ಬುಧ್ವಾರ್ ಮತ್ತು ಬುಲ್ಲೆಚಾಕ್‌ನಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಬಳಿಕ ಶಂಕಿತರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವೇಳೆ ಘಟನಾ ಸ್ಥಳದಿಂದ ಪರಿಶೀಲಿಸಿದಾಗ 58 ಮಾದಕ ದ್ರವ್ಯಗಳ ಪ್ಯಾಕೆಟ್‌, 2 ಪಿಸ್ತೂಲುಗಳು, ನಾಲ್ಕು ಮ್ಯಾಗಜೀನ್ ಗಳು ಹಾಗೂ ಕೆಲ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.