ADVERTISEMENT

ಹಾಸಿಗೆ ಮೇಲೆ ಮಲಗಿ ವಿಚಾರಣೆಗೆ ಹಾಜರಾದ ವಕೀಲ: ಸುಪ್ರೀಂ ಕೋರ್ಟ್ ಅಸಮಾಧಾನ

ಪಿಟಿಐ
Published 20 ಜೂನ್ 2020, 16:18 IST
Last Updated 20 ಜೂನ್ 2020, 16:18 IST
ವಿಡಿಯೊ ಕಾನ್ಫರೆನ್ಸ್‌–ಪ್ರಾತಿನಿಧಿಕ ಚಿತ್ರ
ವಿಡಿಯೊ ಕಾನ್ಫರೆನ್ಸ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹಾಸಿಗೆ ಮೇಲೆ ಮಲಗಿ ನ್ಯಾಯಾಲಯದ ಕಲಾಪಕ್ಕೆ ಹಾಜರಾದ ವಕೀಲರೊಬ್ಬರ ನಡೆಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದ ಕಲಾಪದ ಸಂದರ್ಭದಲ್ಲಿ ವಕೀಲರೊಬ್ಬರು ಟೀಶರ್ಟ್‌ ಧರಿಸಿದ್ದಲ್ಲದ್ದೇ ಶಿಷ್ಟಾಚಾರ ಪಾಲಿಸದ ರೀತಿಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

ಕಲಾಪದ ಸಾರ್ವಜನಿಕ ಸ್ವರೂಪವನ್ನು ಗಮನದಲ್ಲಿಸಿಕೊಂಡು, ನ್ಯಾಯಾಲಯದ ಕನಿಷ್ಠ ಶಿಷ್ಟಾಚಾರವನ್ನು ಅನುಸರಿಸಬೇಕು.ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆಯಲ್ಲಿ ಅಗತ್ಯವಲ್ಲದ ದೃಶ್ಯಗಳಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಅವರ ಬಳಿ ವಕೀಲರು ಕ್ಷಮಾಪಣೆ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.