ADVERTISEMENT

‘ಕ್ವಾಡ್’ ರಾಷ್ಟ್ರಗಳ ಮುಖಂಡರ ವರ್ಚುವಲ್ ಸಭೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:22 IST
Last Updated 5 ಮಾರ್ಚ್ 2021, 15:22 IST

ನವದೆಹಲಿ: ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖಂಡರು ಶೀಘ್ರದಲ್ಲಿಯೇ ವರ್ಚುವಲ್‌ ಸ್ವರೂಪದಲ್ಲಿ ಸಭೆ ನಡೆಸಲಿದ್ದು, ಪರಸ್ಪರ ಬಾಂಧವ್ಯ ವೃದ್ಧಿಗೆ ಒತ್ತು ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಯೋಶಿಯಿದೆ ಸುಗಾ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಈ ಸಭೆಯಲ್ಲಿ ಪಾಲ್ಗೊಳ್ಳುವರು.

ಸರ್ಕಾರದ ಮುಖ್ಯಸ್ಥರ ಮಾತುಕತೆ ಜತೆಗೆ ಶೃಂಗದ ಸ್ಥಾನ ಉನ್ನತೀಕರಣವಾಗಲಿದೆ. ಏಷ್ಯಾ ಪೆಸಿಫಿಕ್ ವಲಯದಲ್ಲಿ ಚೀನಾವನ್ನು ಎದುರಿಸಲು ನಾಲ್ಕು ರಾಷ್ಟ್ರಗಳು ಒಟ್ಟಾಗಿ ಶೃಂಗವನ್ನು ರಚಿಸಿಕೊಂಡಿವೆ.

ADVERTISEMENT

ಸಿಡ್ನಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯ ಪ್ರಧಾನಿ ಈ ಭೇಟಿಯನ್ನು ದೃಢಪಡಿಸಿದ್ದು, ಉದ್ದೇಶಿತ ಸಭೆ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ನಾಲ್ಕು ರಾಷ್ಟ್ರಗಳ ಮುಖಂಡರು ನಂತರ ಭೇಟಿಯಾಗಿ ಚರ್ಚಿಸುವರು ಎಂದರು. ನಾಲ್ಕು ರಾಷ್ಟ್ರಗಳ ಮುಖಂಡರು ಸೇರಿ ಚರ್ಚಿಸುವ ಅಗತ್ಯವನ್ನು ಬೈಡೆನ್ ಆಡಳಿತವು ಕಳೆದ ತಿಂಗಳು ಪ್ರಸ್ತಾಪ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.