ADVERTISEMENT

ಮಹಾರಾಷ್ಟ್ರ ಪ್ರವಾಹ: ಶೇ 40 ರಷ್ಟು ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 13:55 IST
Last Updated 30 ಸೆಪ್ಟೆಂಬರ್ 2025, 13:55 IST
ಸಾಂಗ್ಲಿ ಪಟ್ಟಣದಲ್ಲಿ ನೀರು ತುಂಬಿದ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋದರು–ಪಿಟಿಐ ಚಿತ್ರ
ಸಾಂಗ್ಲಿ ಪಟ್ಟಣದಲ್ಲಿ ನೀರು ತುಂಬಿದ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋದರು–ಪಿಟಿಐ ಚಿತ್ರ   

ಮುಂಬೈ: ‘ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಹಾಗೂ ಪ್ರವಾಹದಿಂದ ಶೇಕಡಾ 40ರಷ್ಟು ಬೆಳೆಗೆ ಹಾನಿಯಾಗಿದೆ. ಹಾನಿ ಪ್ರಮಾಣದ ಮರಶೀಲನೆ ಮುಂದುವರಿದಿದೆ’ ಎಂದು ಕಂದಾಯ ಸಚಿವ ಚಂದ್ರಶೇಖರ್‌ ಬಾವಂಕುಲೆ ತಿಳಿಸಿದ್ದಾರೆ.

ಕಳೆದ ವಾರ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದ ಮರಾಠವಾಡ ಪ್ರಾಂತ್ಯದ ಸೋಲಾಪುರ, ಸತಾರಾ ಹಾಗೂ ಸಾಂಗ್ಲಿ ಸೇರಿದಂತೆ 8 ಜಿಲ್ಲೆಗಳಲ್ಲಿ ಬೆಳೆಹಾನಿ ಸಂಭವಿಸಿದೆ. ಇದರಿಂದ, ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಬೆಳೆಯು ಸಂಪೂರ್ಣವಾಗಿ ನಾಶಗೊಂಡಿದೆ.

‘ಅಕ್ಟೋಬರ್‌ 5ರ ವೇಳೆಗೆ ಇಡೀ ರಾಜ್ಯದ ಹಾನಿಯ ಪರಿಶೀಲನೆ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆ, ಅಜಿತ್‌ ಪವಾರ್‌ ಅವರು ಸಭೆ ನಡೆಸಿ, ಆರ್ಥಿಕ ನೆರವು ಘೋಷಿಸಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಕೆಲವು ಪ್ರದೇಶಗಳಿಗೆ ಇನ್ನೂ ಯಾರೂ ತಲುಪಲಾಗಿಲ್ಲ. ಹಾನಿಪೀಡಿತ ಪ್ರದೇಶಗಳಿಗೆ ತೆರಳಿ, ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಶೇಕಡಾ 40ರಷ್ಟು ಬೆಳೆಯು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿ, ಹಾನಿಯಾಗಿದೆ’ ಎಂದು ಸಚಿವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.