ADVERTISEMENT

ಭದೋಹಿ: ಸಿಡಿಲು ಬಡಿದು ಇಬ್ಬರ ಸಾವು

ಪಿಟಿಐ
Published 12 ಜುಲೈ 2025, 16:23 IST
Last Updated 12 ಜುಲೈ 2025, 16:23 IST
.
.   

ಭದೋಹಿ, (ಉತ್ತರ ಪ್ರದೇಶ): ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದರಿಂದ ಇಬ್ಬರು ಮಹಿಳೆಯರು ಪ್ರತ್ಯೇಕ ಘಟನೆಗಳಲ್ಲಿ ಶನಿವಾರ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಸಮಾಧಾ ಖಾಸ್‌ ಗ್ರಾಮದ ಸುಧಾ ದೇವಿ (55) ಮೃತಪಟ್ಟರೆ, ರೀಟಾ ದೇವಿ ಹಾಗೂ ಇವರ ಪುತ್ರಿ ಆಂಟಿಮಾ ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಔರೈ ಪೊಲೀಸ್‌ ಠಾಣಾಧಿಕಾರಿ ತಿಳಿಸಿದ್ದಾರೆ.

ಹಥಿಯಾ ದಿಹ್‌ ಗ್ರಾಮದಲ್ಲಿ ಸೋನಮ್‌ ಸರೋಜ್‌ (19) ಸಾವಿಗೀಡಾದರೆ, ಅವರ ಸೋದರ ಸಂಬಂಧಿ ಸಂಧ್ಯಾ ಸರೋಜ್‌ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.