ADVERTISEMENT

ಉಗ್ರರು, ಪಾತಕಿಗಳ ನಂಟು:12 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 18:53 IST
Last Updated 21 ಮಾರ್ಚ್ 2023, 18:53 IST
   

ನವದೆಹಲಿ: ಉಗ್ರರು ಮತ್ತು ಪಾತಕಿಗಳ ನಂಟು ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) 12 ಆರೋಪಿಗಳ ವಿರುದ್ಧ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. ಖಾಲಿಸ್ತಾನ ಪರ ಸಂಘಟನೆಗಳು ಮತ್ತು ಪಾಕಿಸ್ತಾನದ ಕೆಲವು ಸಂಚುಕೋರ
ರೊಂದಿಗೆ ಆರೋಪಿಗಳು ಸಂಪರ್ಕ ಹೊಂದಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

‘ಖಾಲಿಸ್ತಾನ್‌ ಟೈಗರ್ ಫೋರ್ಸ್‌, ಉಗ್ರನಾದ ಅರ್ಶದೀಪ್‌ ಸಿಂಗ್‌ ಗಿಲ್‌ ಜತೆಗೆ ಆರೋಪಿಗಳು ಸಂಪರ್ಕ ಹೊಂದಿದ್ದರು. ಈ 12 ಆರೋಪಿಗಳು ಅಲ್ಲದೆ, ಇನ್ನೂ 10 ಮಂದಿಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ದೇಶದ ಕೆಲವು ನಾಯಕರು, ಉದ್ಯಮಿ
ಗಳು ಮತ್ತು ಗಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಹಣ ವಸೂಲಿ ಮಾಡಲೂ ಸಂಚು ರೂಪಿಸಿದ್ದರು’ ಎಂದು ಎನ್‌ಐಎ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT