ಗುವಾಹಟಿ : ‘ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಅಕ್ರಮವಾಗಿ ವಲಸೆ ಬಂದವರಿಗೆ ಇಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಸ್ಪಷ್ಟಪಡಿಸಿದರು.
ಈಶಾನ್ಯ ಮಂಡಳಿಯ (ಎನ್‌ಇಸಿ) ಅಧ್ಯಕ್ಷರೂ ಆಗಿರುವ ಶಾ ಅವರು ಭಾನುವಾರ ಎನ್‌ಇಸಿಯ 68ನೇ ಅಧಿವೇಶನದಲ್ಲಿ ಈಶಾನ್ಯದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು.
371ನೇ ವಿಧಿಯ ರದ್ದತಿ ಇಲ್ಲ: ‘ಈಶಾನ್ಯ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುವ ಸಂವಿಧಾನದ 371ನೇ ವಿಧಿಯನ್ನು ರದ್ದುಮಾಡುವುದಿಲ್ಲ’ ಎಂದು ಶಾ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.