ADVERTISEMENT

ಲಾಕ್‌ಡೌನ್: ದೆಹಲಿಯಲ್ಲಿ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 21:07 IST
Last Updated 23 ಮಾರ್ಚ್ 2020, 21:07 IST
ಕೊರೊನಾ ಮಹಾಮಾರಿ ಹರಡುವಿಕೆ ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್‌ಡೌನ್‌ ಸಂದರ್ಭ ನವದೆಹಲಿಯಲ್ಲಿ ಸೋಮವಾರ ಮನೆ ಬಿಟ್ಟು ಹೊರ ಬಂದ ಸಾರ್ವಜನಿಕರನ್ನು ತಡೆದು ತಿಳಿವಳಿಕೆ ಮೂಡಿಸಿದ ಪೊಲೀಸರು
ಕೊರೊನಾ ಮಹಾಮಾರಿ ಹರಡುವಿಕೆ ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್‌ಡೌನ್‌ ಸಂದರ್ಭ ನವದೆಹಲಿಯಲ್ಲಿ ಸೋಮವಾರ ಮನೆ ಬಿಟ್ಟು ಹೊರ ಬಂದ ಸಾರ್ವಜನಿಕರನ್ನು ತಡೆದು ತಿಳಿವಳಿಕೆ ಮೂಡಿಸಿದ ಪೊಲೀಸರು   

ನವದೆಹಲಿ: ಕೊರೊನಾ ಸೋಂಕು ತಡೆಗಾಗಿ ಭಾನುವಾರ ಸಂಜೆಯಿಂದಲೇ ದೆಹಲಿ ಸರ್ಕಾರ ಘೋಷಿಸಿರುವ ‘ಲಾಕ್‌ಡೌನ್‌’ಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಜನತಾ ಕರ್ಫ್ಯೂ’ ಬೆಂಬಲಾರ್ಥ ಭಾನುವಾರವಿಡೀ ಮನೆ ಬಿಟ್ಟು ಕದಲದ ರಾಷ್ಟ್ರ ರಾಜಧಾನಿಯ ಜನರು ಸೋಮವಾರವೂ ಮನೆಯಲ್ಲೇ ಉಳಿಯುವ ಮೂಲಕ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಗತ್ಯವಿರುವ ಅಂತರ ಕಾಯ್ದುಕೊಂಡರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಟೊ ರಿಕ್ಷಾ, ಓಲಾ, ಉಬರ್‌ ಟ್ಯಾಕ್ಸಿ, ದೆಹಲಿ ಸಾರಿಗೆ ನಿಗಮದ ಬಸ್‌ ಮತ್ತು ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು. ಎಲ್ಲ ಅಂಗಡಿಗಳು ಬಂದ್‌ ವ್ಯಾಪಾರ– ವಹಿವಾಟು ಬಂದ್‌ ಆಗಿತ್ತು.

ADVERTISEMENT

ಅಗತ್ಯ ಮತ್ತು ಅನಿವಾರ್ಯ ಕಾರ್ಯ ನಿಮಿತ್ಯ ಕೆಲವು ಜನರು ಮನೆಯಿಂದ ಹೊರಬಂದರು. ಕುತೂಹಲಕ್ಕಾಗಿ ಮನೆಯಿಂದ ಬಂದ ಯುವ ಜನರನ್ನು ತಡೆದು, ಅರಿವು ಮೂಡಿಸಿದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ನವದೆಹಲಿ, ಹಳೆ ದೆಹಲಿ, ನೊಯ್ಡಾ, ಗ್ರೇಟರ್‌ ನೊಯ್ಡಾ, ಗಾಜಿಯಾಬಾದ್‌, ಗುರುಗ್ರಾಮ ಸೇರಿದಂತೆ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌)ದ ಎಲ್ಲೆಡೆ ಜನರು ಕೊರೊನಾ ತಡೆ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಮನೆಯಿಂದ ಹೊರಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.