ADVERTISEMENT

ಜಿ–20 ಅಧ್ಯಕ್ಷತೆ: ನಾಳೆ ಲಾಂಛನ ಅನಾವರಣ

ಪಿಟಿಐ
Published 7 ನವೆಂಬರ್ 2022, 14:34 IST
Last Updated 7 ನವೆಂಬರ್ 2022, 14:34 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತದ ‘ಜಿ–20’ ಅಧ್ಯಕ್ಷತೆ ಕುರಿತಾದ ಲಾಂಛನ, ಥೀಮ್‌ ಹಾಗೂ ವೆಬ್‌ಸೈಟ್‌ ಅನಾವರಣಗೊಳಿಸಲಿದ್ದಾರೆ.

‘ಜಿ–20 ಅಧ್ಯಕ್ಷತೆಯು ಜಾಗತಿಕ ಸಮಸ್ಯೆಗಳಿಗೆ ಕಡಿವಾಣ ಹಾಕಲು ಹಾಗೂ ಜಾಗತಿಕ ಕಾರ್ಯಸೂಚಿಗೆ ತನ್ನದೇ ಆದ ಕೊಡುಗೆ ನೀಡಲು ಭಾರತಕ್ಕೆ ದೊರೆತಿರುವ ಉತ್ತಮ ಅವಕಾಶವಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.

ಭಾರತವು ಡಿಸೆಂಬರ್‌ 1ರಂದು ಜಿ–20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ.

ADVERTISEMENT

ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಭಾರತ, ಇಂಡೊನೇಷ್ಯಾ, ಇಟಲಿ, ಜಪಾನ್‌, ರಿಪಬ್ಲಿಕ್‌ ಆಫ್‌ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಈ ಗುಂಪಿನಲ್ಲಿವೆ. ಸದ್ಯ ಇಂಡೊನೇಷ್ಯಾ ಈ ಗುಂಪಿನ ಅಧ್ಯಕ್ಷತೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.