ADVERTISEMENT

ಲೋಕಸಭಾ ಚುನಾವಣೆ: ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ

ಪಿಟಿಐ
Published 14 ಮಾರ್ಚ್ 2019, 20:24 IST
Last Updated 14 ಮಾರ್ಚ್ 2019, 20:24 IST
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ   

ನವದೆಹಲಿ: ಲೋಕಸಭಾ ಚುನಾವಣೆಗೆ 12 ಅಭ್ಯರ್ಥಿಗಳ ಪಟ್ಟಿಯನ್ನು ಎನ್‌ಸಿಪಿ ಗುರುವಾರ ಬಿಡುಗಡೆ ಮಾಡಿದೆ. ಪವಾರ್ ಮನೆತನದ ಗಟ್ಟಿನೆಲೆಯಿರುವ ಬಾರಾಮತಿಯಿಂದ ಪಕ್ಷದ ನಾಯಕಿ ಸುಪ್ರಿಯಾ ಸುಳೆ ಅವರು ಕಣಕ್ಕಿಳಿಯಲಿದ್ದಾರೆ.

ಸತಾರಾದಿಂದ ಉದಯನರಾಜೇ ಭೋಸ್ಲೆ, ಕೊಲ್ಲಾಪುರದಿಂದಧನಂಜಯ ಮಹದಿಕ್, ಠಾಣೆಯಿಂದ ಆನಂದ್ ಪರಾಂಜಪೆ, ಮುಂಬೈ ಈಶಾನ್ಯದಿಂದ ಸಂಜಯ್ ದಿನಾ ಪಾಟೀಲ್ ಸ್ಪರ್ಧಿಸಲಿದ್ದು,ಲಕ್ಷದ್ವೀಪದಿಂದ ಮೊಹಮ್ಮದ್ ಫೈಜಲ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT