ADVERTISEMENT

10 ದಿನದಲ್ಲಿ ದಿನಾಂಕ ನಿಗದಿಗೆ ’ಸುಪ್ರೀಂ‘ ಸೂಚನೆ

ಲೋಕಪಾಲ ಆಯ್ಕೆ ಸಮಿತಿ ಸಭೆ

ಪಿಟಿಐ
Published 7 ಮಾರ್ಚ್ 2019, 17:31 IST
Last Updated 7 ಮಾರ್ಚ್ 2019, 17:31 IST
   

ನವದೆಹಲಿ: ಲೋಕಪಾಲರ ನೇಮಕ ಕುರಿತಂತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಸಂಬಂಧ ಲೋಕಪಾಲ ಆಯ್ಕೆ ಸಮಿತಿ ಸಭೆ ದಿನಾಂಕವನ್ನು 10 ದಿನಗಳ ಒಳಗೆ ತಿಳಿಸುವಂತೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್ ಅವರಿಗೆ ಸುಪ್ರೀಂಕೋರ್ಟ್‌ ಗುರುವಾರ ಸೂಚಿಸಿದೆ.

’ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಪ್ರಕಾಶ್ ದೇಸಾಯಿ ನೇತೃತ್ವದ ಶೋಧನಾ ಸಮಿತಿಯು ಲೋಕಪಾಲ ಸಂಸ್ಥೆಯ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರ ನೇಮಕಕ್ಕಾಗಿ ಒಟ್ಟು ಮೂರು ಪ್ಯಾನೆಲ್‌ಗಳ ಹೆಸರುಗಳನ್ನು ಶಿಫಾರಸು ಮಾಡಿದೆ‘ ಎಂದು ಕೆ.ಕೆ.ವೇಣುಗೋಪಾಲ್‌ ಅವರು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

’ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿ ಸಭೆಯನ್ನು ಶೀಘ್ರವೇ ಆಯೋಜನೆ ಮಾಡಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ತಿಳಿಸುವುದಾಗಿಯೂ‘ ಅವರು ಹೇಳಿದರು.

ADVERTISEMENT

ಶೋಧನಾ ಸಮಿತಿ ಶಿಫಾರಸಿನಲ್ಲಿರುವ ಲೋಕಪಾಲ ಮತ್ತು ಇತರ ಇಬ್ಬರು ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸುವಂತೆ ನಿರ್ದೇಶನ ನೀಡಲು ನ್ಯಾಯಪೀಠ ನಿರಾಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.