ADVERTISEMENT

ನುಡಿ–ಕಿಡಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 19:31 IST
Last Updated 25 ಮಾರ್ಚ್ 2019, 19:31 IST
ಕಿರಣ್ಮಯ್ ನಂದಾ
ಕಿರಣ್ಮಯ್ ನಂದಾ   

ರ‍್ಯಾಲಿಗಳಲ್ಲಿ ವಿರೋಧಪಕ್ಷಗಳನ್ನೇ ಬಿಜೆಪಿ ಏಕೆ ಗುರಿ ಮಾಡುತ್ತಿದೆ? ಐದು ವರ್ಷಗಳ ಆಡಳಿತದಲ್ಲಿ ಯಾವ ಸಾಧನೆಯನ್ನೂ ಸರ್ಕಾರ ಮಾಡಿಲ್ಲವೇ? ಜನರ ಆಕ್ರೋಶ ಹಾಗೂ ಸೋಲಿನ ಭೀತಿಯಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಚಾರಕ್ಕೇ ಇಳಿಯುತ್ತಿಲ್ಲ. ಸೂರ್ಯನ ತಾಪ ಜಾಸ್ತಿಯಿದೆ ಎಂಬ ನೆಪದ ಮೊರೆ ಹೋಗಿದ್ದಾರೆ

–ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ

ಅಮೇಠಿಯ ಜತೆಗೆಕರ್ನಾಟಕ ಅಥವಾ ಕೇರಳದ ಒಂದು ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನಾ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ರಾಹುಲ್ ಅವರ ಈ ನಡೆ ಸೂಚಿಸುತ್ತದೆ

ADVERTISEMENT

–ಕಿರಣ್ಮಯ್ ನಂದಾ, ಎಸ್‌ಪಿ ಉಪಾಧ್ಯಕ್ಷ

ಏಕೀಕೃತ ಭಾರತಕ್ಕಾಗಿ ಈ ಚುನಾವಣೆ. ಬಿಜೆಪಿಯು ನಾಶಪಡಿಸಲು ಹೊರಟಿರುವ ಈ ದೇಶದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಈ ಹೋರಾಟ. ಚುನಾವಣೆ ಬಳಿಕ ಜನರು ಮೋದಿ ಸರ್ಕಾರವನ್ನು ಓಡಿಸಲಿದ್ದಾರೆ. ಚುನಾವಣೆ ಬಳಿಕ ಭಾರತೀಯ ಜನತಾ ಪಾರ್ಟಿಯು ಭಾರತೀಯ ಜೋಕರ್ ಪಾರ್ಟಿ ಎನಿಸಿಕೊಳ್ಳಲಿದೆ

–ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.