ADVERTISEMENT

ಸಾಲ ಕೊಡುವ ಆ್ಯಪ್‌ಗಳ ಮೂಲಕ ವಂಚನೆ: ಚೀನಾದ ವ್ಯಕ್ತಿಗಾಗಿ ಹುಡುಕಾಟ

ಪಿಟಿಐ
Published 13 ಜುಲೈ 2022, 4:27 IST
Last Updated 13 ಜುಲೈ 2022, 4:27 IST
ಆರೋಪಿ ಲಿಯು ಯೀ
ಆರೋಪಿ ಲಿಯು ಯೀ   

ಭುವನೇಶ್ವರ: ಮೊಬೈಲ್‌ ಆ್ಯಪ್‌ಗಳ ಮೂಲಕ ತ್ವರಿತಗತಿಯಲ್ಲಿ ಸಾಲವನ್ನು ಒದಗಿಸಿ ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣದ ಪ್ರಮುಖ ಆರೋಪಿ ಚೀನಾದ ನಾಗರಿಕ ಲಿಯು ಯೀ ವಿರುದ್ಧ ಲುಕ್‌ ಔಟ್‌ ನೋಟಿಸ್‌ ನೀಡಲಾಗಿದೆ.

ವಾಣಿಜ್ಯ ಅಪರಾಧಗಳ ವಿಭಾಗ(ಇಒಡ್ಲ್ಯು)ದ ಆಗ್ರಹದ ಮೇರೆಗೆ ಬ್ಯೂರೋ ಆಫ್‌ ಇಮಿಗ್ರೇಷನ್‌ (ಬಿಒಐ) ಈ ಆದೇಶ ಹೊರಡಿಸಿದೆ ಎಂದು ಒಡಿಶಾದ ಪೊಲೀಸರು ಹೇಳಿದ್ದಾರೆ.

ಏಪ್ರಿಲ್‌ 21ರಂದು ಇಒಡ್ಲ್ಯು ಪೊಲೀಸ್‌ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ ಲಿಯು ಯೀ ಪ್ರಮುಖ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ವಿವಿಧ ರಾಜ್ಯಗಳ ಪೊಲೀಸರ ನೆರವಿನಿಂದ ಈಗಾಗಲೇ ಐವರು ಲಿಯು ಯೀ ಸಹಚರರನ್ನು ಇಒಡ್ಲ್ಯು ಬಂಧಿಸಿದೆ.

ADVERTISEMENT

ಬೆಂಗಳೂರು ಸೇರಿದಂತೆ ಮುಂಬೈ, ದೆಹಲಿಯಲ್ಲಿ ದಾಳಿ ನಡೆಸಿದ ಇಒಡ್ಲ್ಯು ₹ 6.57 ಕೋಟಿಗೂ ಹೆಚ್ಚು ಮೊತ್ತವನ್ನು ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.