ADVERTISEMENT

2 ದಶಕಗಳಲ್ಲಿ 350 ವಿಮಾನ ಖರೀದಿ: ಐಎಎಫ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 14:49 IST
Last Updated 8 ಸೆಪ್ಟೆಂಬರ್ 2021, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಭಾರತೀಯ ವಾಯುಪಡೆಯು (ಐಎಎಫ್‌) ಮುಂದಿನ ಎರಡು ದಶಕಗಳಲ್ಲಿ ಸುಮಾರು 350 ವಿಮಾನಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್‌ ಸಿಂಗ್‌ ಭದೌರಿಯಾ ಬುಧವಾರ ಹೇಳಿದ್ದಾರೆ.

ಭಾರತೀಯ ಏರೋಸ್ಪೇಸ್ ವಲಯದ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಚೀನಾದ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ವಾಯುಪಡೆಯ ಒಟ್ಟಾರೆ ಅಸೀಮಬಲವನ್ನು ಹೆಚ್ಚಿಸುವ ಅಗತ್ಯ ಇದೆ ಎಂದರು.

‘ಉತ್ತರದ ನೆರೆಹೊರೆಯ ರಾಷ್ಟ್ರಗಳನ್ನು ನೋಡಿದರೆ, ನಾವು ಭದ್ರತೆಯ ಕಾರಣಗಳಿಗಾಗಿ ಸ್ವದೇಶಿ ಉದ್ಯಮಗಳಿಂದಲೇ ನಿರ್ಮಿಸಬೇಕಾದ ಮತ್ತು ಸ್ಥಾಪಿತ ತಂತ್ರಜ್ಞಾನಗಳನ್ನು ಹೊಂದುವ ಅನಿವಾರ್ಯತೆ ಇದೆ. ವಿವಿಧ ಸವಾಲುಗಳನ್ನು ಮೆಟ್ಟಿನಿಲ್ಲಲು ದೇಶವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ದೇಶೀಯವಾಗಿ ಸುಮಾರು 350 ವಿಮಾನಗಳನ್ನು ಖರೀದಿಸಲು ವಾಯುಪಡೆ ಎದುರು ನೋಡುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ತೇಜಸ್ ಲಘು ಯುದ್ಧ ವಿಮಾನ ಯೋಜನೆಯು ದೇಶದ ಏರೋಸ್ಪೇಸ್ ಉದ್ಯಮದಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಇದು ಮತ್ತಷ್ಟು ಬೆಳೆಯುವ ದೊಡ್ಡ ಸಾಮರ್ಥ್ಯವನ್ನೂ ಹೊಂದಿದೆ ಎಂದು ಭದೌರಿಯಾ ಇದೇ ಸಂದರ್ಭ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.