ADVERTISEMENT

ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ‘ಲಾಟರಿ ರಾಜ’ ಮಾರ್ಟಿನ್‌ ಪುತ್ರ

ಪಿಟಿಐ
Published 14 ಡಿಸೆಂಬರ್ 2025, 14:23 IST
Last Updated 14 ಡಿಸೆಂಬರ್ 2025, 14:23 IST
   

ಪುದುಚೇರಿ: ‘ಲಾಟರಿ ರಾಜ’ ಸ್ಯಾಂಟಿಯಾಗೊ ಮಾರ್ಟಿನ್‌ ಅವರ ಪುತ್ರ ಜೋಸ್‌ ಚಾರ್ಲ್ಸ್‌ ಮಾರ್ಟಿನ್‌ ಅವರು ‘ಲಕ್ಷೀಯ ಜನನಾಯಕ ಕಚ್ಚಿ’ (ಎಲ್‌ಜೆಕೆ) ಎಂಬ ರಾಜಕೀಯ ಪಕ್ಷಕ್ಕೆ ಭಾನುವಾರ ಚಾಲನೆ ನೀಡಿದರು.

ಜೆಸಿಎಂ ಮಕ್ಕಳ ಮಂದಿರ ಸಂಘಟನೆಯ ಮೂಲಕ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಅಗತ್ಯವಿರುವವರಿಗೆ ನೆರವು ನೀಡುವಲ್ಲಿ ತೊಡಗಿಸಿಕೊಂಡಿದ್ದ ಮಾರ್ಟಿನ್‌, ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಇದೀಗ ಸಂಘಟನೆಯನ್ನೇ ತನ್ನ ನೂತನ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಜೋಸ್‌ 2015ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಸ್ಥಳೀಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಿದ್ದರಿಂದ 2024ರಲ್ಲಿ ಕೇಸರಿ ಪಾಳಯದಿಂದ ದೂರವಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.