ADVERTISEMENT

ಪೆಟ್ರೋಲ್, ಡೀಸೆಲ್ ಆಯ್ತು, ಈಗ ಎಲ್‌ಪಿಜಿ ಬೆಲೆ ಏರಿಕೆ ಸರದಿ

ಸಬ್ಸಿಡಿ ಸಹಿತ ಎಲ್‌ಪಿಜಿ ₹2.89, ಸಬ್ಸಿಡಿರಹಿತ ₹59 ತುಟ್ಟಿ

ಪಿಟಿಐ
Published 30 ಸೆಪ್ಟೆಂಬರ್ 2018, 20:31 IST
Last Updated 30 ಸೆಪ್ಟೆಂಬರ್ 2018, 20:31 IST
ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಫರಿದಾಬಾದ್‌ನಲ್ಲಿ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ
ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಫರಿದಾಬಾದ್‌ನಲ್ಲಿ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು₹2.89 ಮತ್ತು ಸಬ್ಸಿಡಿರಹಿತ ಪ್ರತಿ ಸಿಲಿಂಡರ್‌ ಬೆಲೆಯನ್ನು₹59ರಂತೆ ಹೆಚ್ಚಿಸಲಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶ ವಿನಿಮಯ ಏರಿಳಿತದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ.

ಸಿಲಿಂಡರ್ ಬಳಕೆದಾರರ ಬ್ಯಾಂಕ್ ಅಕೌಂಟ್ ಖಾತೆಗೆ ವರ್ಗಾಯಿಸಲಾಗುವ ಸಬ್ಸಿಡಿ ಮೊತ್ತ ಅಕ್ಟೋಬರ್‌ನಿಂದ ಪ್ರತಿ ಸಿಲಿಂಡರ್‌ಗೆ ₹376.60 ಆಗಲಿದೆ. ಇದು ಸೆಪ್ಟೆಂಬರ್‌ನಲ್ಲಿ ₹320.49 ಇತ್ತು.

ಎಲ್‌ಪಿಜಿ ದರ ಏರಿಕೆ ಆಗುತ್ತಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ಭಾರತೀಯ ತೈಲ ನಿಗಮ (ಐಒಸಿ) ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.