ADVERTISEMENT

ಲಖನೌ ರೈಲು ನಿಲ್ದಾಣದಲ್ಲಿ ಮಹಿಳೆಯರದ್ದೇ ಪಾರುಪತ್ಯ

ಡೆಕ್ಕನ್ ಹೆರಾಲ್ಡ್
Published 22 ಅಕ್ಟೋಬರ್ 2025, 7:36 IST
Last Updated 22 ಅಕ್ಟೋಬರ್ 2025, 7:36 IST
<div class="paragraphs"><p>ಲಖನೌ ರೈಲು ನಿಲ್ದಾಣದಲ್ಲಿ ಮಹಿಳೆಯರದ್ದೇ ಪಾರುಪತ್ಯ</p></div>

ಲಖನೌ ರೈಲು ನಿಲ್ದಾಣದಲ್ಲಿ ಮಹಿಳೆಯರದ್ದೇ ಪಾರುಪತ್ಯ

   

ಚಿತ್ರ ಕೃಪೆ: RailMinIndia

ಲಖನೌ: ಇಲ್ಲಿನ ನಗರ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಲಖನೌ ರೈಲು ನಿಲ್ದಾಣ ಉತ್ತರ ಭಾರತದ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ರೈಲು ನಿಲ್ದಾಣ ಎನಿಸಿದೆ.

ADVERTISEMENT

ಈ ನಿಲ್ದಾಣವನ್ನು 34 ಮಹಿಳೆಯರ ತಂಡವು ನಿರ್ವಹಿಸುತ್ತಿದ್ದು, ಟಿಕೆಟ್ ವಿತರಣೆ, ಕಾಯ್ದಿರಿಸುವಿಕೆಯಿಂದ ಹಿಡಿದು ಭದ್ರತೆ, ಸಿಗ್ನಲಿಂಗ್ ಮತ್ತು ಶುಚಿತ್ವದವರೆಗೆ ಅದರ ಕಾರ್ಯಚಟುವಟಿಕೆಯ ಪ್ರತಿಯೊಂದು ಅಂಶವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಲಖನೌ ನಗರ ರೈಲು ನಿಲ್ದಾಣವು ಗೋಮತಿನಗರ-ಮುಂಬೈ, ಗೋರಖ್‌ಪುರ-ಹೈದರಾಬಾದ್, ಬರೌನಿ-ಮುಂಬೈ, ವಾರಾಣಸಿ ಸಿಟಿ-ಲಖನೌ ಜಂಕ್ಷನ್, ಫರೂಕಾಬಾದ್-ಛಾಪ್ರಾ, ಗೋರಖ್‌ಪುರ-ಪಿಲಿಭಿತ್ ಮತ್ತು ಬರೌನಿ-ಲಖನೌ ಸೇರಿದಂತೆ 14 ಜೋಡಿ ಎಕ್ಸ್‌ಪ್ರೆಸ್ ಮತ್ತು ಮೇಲ್ ರೈಲುಗಳನ್ನು ನಿರ್ವಹಿಸುತ್ತದೆ.

ಭಾರತದ ಮೊದಲ ಸಂಪೂರ್ಣ ಮಹಿಳಾ-ನಿರ್ವಹಣೆಯ ರೈಲು ನಿಲ್ದಾಣ ಎಂಬ ಹೆಗ್ಗಳಿಗೆ ಮುಂಬೈನ ಮಾತುಂಗಾ ರೈಲು ನಿಲ್ದಾಣದ್ದಾಗಿದೆ. ಈ ನಿಲ್ದಾಣವನ್ನು 2017ರಿಂದ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.