ADVERTISEMENT

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಲಿಂಗ್ಡೊ ಸಮಿತಿ ಜಾರಿಗೆ ಆಗ್ರಹ: ಪಿಐಎಲ್‌ ವಜಾ

ಪಿಟಿಐ
Published 6 ಜನವರಿ 2026, 15:28 IST
Last Updated 6 ಜನವರಿ 2026, 15:28 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೇಶದಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಸಂಬಂಧಿಸಿ ಚೌಕಟ್ಟು ರೂಪಿಸಿದ 2006ರ ಲಿಂಗ್ಡೊ ವರದಿ ಜಾರಿಗೆ ಒತ್ತಾಯಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಅರ್ಜಿಯು ಯಾವುದೇ ಅರ್ಹತೆ ಹೊಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ತಿಳಿಸಿದೆ. 

‘ನೀವು ಇಲ್ಲಿಂದ ಹೊರಗೆ ತೆರಳಿ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದೀರಿ. ಇದು ಕೇವಲ ಪ್ರಚಾರಕ್ಕಾಗಿ. ಅರ್ಜಿಯೂ ಪ್ರಚಾರದ ಹಿತಾಸಕ್ತಿ ಅರ್ಜಿಯಾಗಿದೆ’ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅರ್ಜಿಯನ್ನು ವಜಾಗೊಳಿಸಿದರು.

ADVERTISEMENT

ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರವು ಲಿಂಗ್ಡೊ ಸಮಿತಿ ರಚಿಸಿತ್ತು. ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ಹಣ ಹಾಗೂ ತೋಳ್ಬಲವನ್ನು ನಿರ್ಮೂಲನೆಗೊಳಿಸುವ ಗುರಿ ಹೊಂದಿತ್ತು. ಶಿಫಾರಸು ಜಾರಿ ಕೋರಿ ಶಿವಕುಮಾರ್‌ ತ್ರಿಪಾಠಿ ಅವರು ನ್ಯಾಯಾಲಯದಲ್ಲಿ ಪಿಐಎಲ್‌ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.