ADVERTISEMENT

ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತ: ಆರು ಕಾರ್ಮಿಕರು ಸಾವು, 24 ಮಂದಿಗೆ ಗಾಯ

ಪಿಟಿಐ
Published 6 ಅಕ್ಟೋಬರ್ 2020, 5:58 IST
Last Updated 6 ಅಕ್ಟೋಬರ್ 2020, 5:58 IST
ಗಾಯಗೊಂಡವರು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು (ಎಎನ್‌ಐ ಚಿತ್ರ)
ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು (ಎಎನ್‌ಐ ಚಿತ್ರ)   

ಧಾರ್‌: ಕೃಷಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು, 24 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಇಂದೋರ್‌–ಅಹಮದಾಬಾದ್‌ ರಸ್ತೆಯಲ್ಲಿರುವ ಚಿಕ್ಲ್ಯಾಫತಾ ಬಳಿ ಅಪಘಾತ ಸಂಭವಿಸಿದೆ. ಗಾಯಗೊಂಡ 24 ಮಂದಿಯಲ್ಲಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲೇಂದ್ರ ಸೋಲಂಕಿ ಮಾಹಿತಿ ನೀಡಿದರು.

ವ್ಯಾನ್‌ನ ಒಂದು ಚಕ್ರ ಪಂಚರ್‌ ಆಗಿತ್ತು. ಆ ಚಕ್ರವನ್ನು ಬದಲಾಯಿಸುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್‌ವೊಂದು ಹಿಂದಿನಿಂದ ವ್ಯಾನಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.