ADVERTISEMENT

ಪಾಕ್‌ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ರಕ್ಷಣಾ ಪ್ರದೇಶ ಚಿತ್ರ ರವಾನೆ: ವ್ಯಕ್ತಿ ಬಂಧನ

ಪಿಟಿಐ
Published 4 ಅಕ್ಟೋಬರ್ 2020, 9:15 IST
Last Updated 4 ಅಕ್ಟೋಬರ್ 2020, 9:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಸಿಕ್‌: ರಕ್ಷಣಾ ಇಲಾಖೆಗೆ ಸೇರಿರುವ ಪ್ರದೇಶದ ಛಾಯಾಚಿತ್ರಗಳನ್ನು ತೆಗೆದು ಪಾಕಿಸ್ತಾನದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿದ ಆರೋಪದ ಮೇರೆಗೆ ಸಂಜೀವ್‌ಕುಮಾರ್‌ (21) ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ತನ್ನ ಮೊಬೈಲ್‌ನಲ್ಲಿ ಜಿಲ್ಲೆಯ ಡಿಯೋಲಲಿಯಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಸೇನಾ ಆಸ್ಪತ್ರೆಯ ಚಿತ್ರ ತೆಗೆಯುವಾಗ ಶುಕ್ರವಾರ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದ. ಆತನಿಂದ ಮೊಬೈಲ್‌ ವಶಪಡಿಸಿಕೊಂಡಿರುವ ಸೇನಾಧಿಕಾರಿಗಳು, ಡಿಯೋಲಲಿ ಕ್ಯಾಂಪ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೇನಾ ಅಧಿಕಾರಿಗಳು ನೀಡಿದ ದೂರಿನ ಅನ್ವಯ, ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿ ಮೂಲತಃ ಬಿಹಾರದ ಗೋಪಲಗಂಜ್ ಜಿಲ್ಲೆಯವರಾಗಿದ್ದು, ಡಿಯೋಲಲಿ ಕ್ಯಾಂಪ್‌ನ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿದ್ದ. ಈತ ರಕ್ಷಣಾ ಪ್ರದೇಶದಲ್ಲಿರುವ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.