ADVERTISEMENT

ಮಹಾರಾಷ್ಟ್ರ: ಮಿನಿ ಟ್ರಕ್‌ ಡಿಕ್ಕಿ– ಇಬ್ಬರು ವಾರಕರಿಗಳ ಸಾವು, 13 ಮಂದಿಗೆ ಗಾಯ

ಪಿಟಿಐ
Published 27 ನವೆಂಬರ್ 2021, 5:25 IST
Last Updated 27 ನವೆಂಬರ್ 2021, 5:25 IST
   

ಪುಣೆ: ಜಿಲ್ಲೆಯ ಕನ್ಹೆ ಗ್ರಾಮದ ಬಳಿ ಶನಿವಾರ ನಸುಕಿನಲ್ಲಿ ಮಿನಿ ಟ್ರಕ್‌ವೊಂದು ಪಾದಯಾತ್ರೆ ಹೊರಟಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಾರಕರಿಗಳು (ಪಂಢರಪುರದ ವಿಠ್ಠಲ ದೇವರ ಭಕ್ತರು ) ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ.

ರಾಯಗಡ ಜಿಲ್ಲೆಯ ವಾರಕರಿಗಳು ಪುಣೆಯಿಂದ 25 ಕಿ.ಮೀ. ದೂರದಲ್ಲಿರುವ ಆಳಂದಿಗೆ ತೆರಳುತ್ತಿದ್ದರು.

‘ಹಳೆ ಮುಂಬೈ–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಕರಿಗಳು ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಗಾಯಗೊಂಡರು. ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಗಾಯಗೊಂಡರ ಪೈಕಿ ಇಬ್ಬರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೃತಪಟ್ಟರು’ ಎಂದು ಪೊಲೀಸ್‌ ಅಧಿಕಾರಿ ವಿಲಾಸ್‌ ಭೋಸ್ಲೆ ತಿಳಿಸಿದರು.

ADVERTISEMENT

ಮಿನಿ ಟ್ರಕ್‌ ಚಾಲಕನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.