
ಪಿಟಿಐ
ಮುಂಬೈ: ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ಘರ್ಷಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸಚಿವ ಭರತ್ ಗೋಗಾವಲೆ (ಶಿವಸೇನಾ) ಅವರ ಪುತ್ರ ವಿಕಾಸ್ ಗೋಗಾವಲೆ ಪೊಲೀಸರ ಮುಂದೆ ಶುಕ್ರವಾರ ಶರಣಾಗಿದ್ದಾರೆ.
ಸಚಿವರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಾಂಬೆ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
‘ಒಂದು ವಾರದಿಂದ ಸಚಿವರ ಪುತ್ರ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿಗಳೂ ಅಸಹಾಯಕರಾಗಿದ್ದಾರೆ. ರಾಜ್ಯದಲ್ಲಿ ನೆಲದ ಕಾನೂನು ಅಸ್ತಿತ್ವದಲ್ಲಿದೆಯೇ?’ ಎಂದಿತ್ತು.
ವಿಕಾಸ್ ಸೇರಿ ಎಲ್ಲ ಆರೋಪಿಗಳೂ ಪೊಲೀಸರ ಮುಂದೆ ಶರಣಾಗಿರುವ ಬಗ್ಗೆ ನ್ಯಾಯಮೂರ್ತಿ ಮಾಧವ್ ಜಂಬಾರ್ ಅವರು ಇದ್ದ ಪೀಠಕ್ಕೆ ಅಡ್ವೊಕೇಟ್ ಜನರಲ್ ಮಿಲಿಂದ್ ಸಾತೆ ಅವರು ಶುಕ್ರವಾರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.