
ಪಿಟಿಐ
ಮಹಾರಾಷ್ಟ್ರ: ಅಕೋಲಾ ಮಹಾನಗರ ಪಾಲಿಕೆಗೆ ಬಿಜೆಪಿಯ ಶಾರದಾ ಖೇಡ್ಕರ್ ಮೇಯರ್
ನಾಗ್ಪುರ: ಮಹಾರಾಷ್ಟ್ರದ ಅಕೋಲಾ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಶಾರದಾ ಖೇಡ್ಕರ್ ಅವರು ಶುಕ್ರವಾರ ಆಯ್ಕೆಯಾದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಸುನೀಲ್ ಲಹಾನೆ, ‘ಪಾಲಿಕೆ ಸದಸ್ಯರು, ಮೇಯರ್ ಸ್ಥಾನಕ್ಕೆ ಖೇಡ್ಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅಮೋಲ್ ಗೊಗೆ ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದರು.
ಖೇಡ್ಕರ್ ಅವರು 45 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ ಅಭ್ಯರ್ಥಿ ಶಿವಸೇನಾದ (ಉದ್ಧವ್ ಠಾಕ್ರೆ ಬಣ) ಸುರೇಖಾ ಕಾಳೆ ಅವರು 32 ಮತಗಳನ್ನು ಪಡೆದರು. ಬಿಜೆಪಿಯ ಗೊಗೆ ಅವರ ಎದುರು ಕಾಂಗ್ರೆಸ್‌ನ ಅಜಾದ್ ಖಾನ್ ಅವರು 32 ಮತ ಪಡೆದು ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.