ADVERTISEMENT

ಕೇಂದ್ರ ಸಚಿವ ರಾಧಾ ಮೋಹನ್‌ ಸಿಂಗ್‌, ಮಹಾ ಸಿಎಂ ಅವರಿಂದ ಅಣ್ಣಹಜಾರೆ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 11:10 IST
Last Updated 5 ಫೆಬ್ರುವರಿ 2019, 11:10 IST
   

ರಾಲೆಗನಸಿದ್ಧಿ, ಮಹಾರಾಷ್ಟ್ರ:ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ, ಜನ ಆಂದೋಲನ ಸತ್ಯಾಗ್ರಹ ಹೆಸರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವಅಣ್ಣಹಜಾರೆ(81) ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರಫಡ್ನಾವೀಸ್‌ ಭೇಟಿ ಮಾಡಿದರು.

ಕೇಂದ್ರ ಸಚಿವರಾದರಾಧಾ ಮೋಹನ್‌ ಸಿಂಗ್‌, ಬಿಜೆಪಿ ಸಂಸದ ಶುಭಾಸ್‌ ಭಾಂಮ್ರೆ ಅವರೊಂದಿಗೆ ಅಣ್ಣಾಹಜಾರೆ ಅವರನ್ನು ಭೇಟಿ ಮಾಡಿದರು. ಇದೊಂದು ಸೌಹಾರ್ದಭೇಟಿಯಾಗಿದ್ದು ಯಾವುದೇ ರಾಜಕೀಯ ಚರ್ಚೆ ನಡೆಸಲಾಗಲಿಲ್ಲಎಂದು ಫಡ್ನಾವೀಸ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಅಣ್ಣಹಜಾರೆ ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದಿಗೆ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಅಣ್ಣಹಜಾರೆ ಆರೋಪಿಸಿದ್ದರು.ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ತಾವು ನಡೆಸಿದ ಸತ್ಯಾಗ್ರಹದಿಂದಲೇ ಕೇಂದ್ರದಲ್ಲಿ ಬಿಜೆಪಿ ಮತ್ತು ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಈ ದೇಶದ ಜನರಿಗೆ ಗೊತ್ತಿದೆ.

ADVERTISEMENT

ರಾಜಕೀಯ ಉದ್ದೇಶಗಳಿಗೆ ನನ್ನ ಹೋರಾಟವನ್ನು ದುರ್ಬಳಕೆ ಮಾಡಿಕೊಂಡಿರುವ ಆ ಎರಡು ಪಕ್ಷಗಳ ಮೇಲೆ ನನಗೆ ನಂಬಿಕೆ ಉಳಿದಿಲ್ಲ ಎಂದು ಸೋಮವಾರ ಅಣ್ಣಹಜಾರೆ ಹೇಳಿದ್ದರು. ಈ ಬೆನ್ನಲ್ಲೆಸಚಿವರಾದ ರಾಧಾ ಮೋಹನ್‌ ಸಿಂಗ್‌ ಹಾಗೂ ಫಡ್ನಾವವೀಸ್‌ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.