ADVERTISEMENT

ರಾಮ್‌ ಕದಂ ನಾಲಿಗೆ ಕತ್ತರಿಸಿದವರಿಗೆ ₹ 5 ಲಕ್ಷ ಬಹುಮಾನ: ಮಾಜಿ ಸಚಿವ ಸುಬೋದ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 4:04 IST
Last Updated 7 ಸೆಪ್ಟೆಂಬರ್ 2018, 4:04 IST
   

ಪುಣೆ:'ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕಿಡ್ನಾಪ್ ಮಾಡಿ ತಂದು ಕೊಡ್ತೀನಿ’ ಎಂದಿದ್ದ ಮುಂಬೈಯ ಘಟ್ಕೋಪರ್ ಕ್ಷೇತ್ರದ ಶಾಸಕ ರಾಮ್‌ ಕದಂ ಅವರ ನಾಲಿಗೆ ಕತ್ತರಿಸಿದವರಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಕಾಂಗ್ರೆಸ್‌ನ ಮಾಜಿ ಸಚಿವ ಸುಬೋದ್‌ ಸಾಹುಜಿ ತಿಳಿಸಿದ್ದಾರೆ.

ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಅವರು ‘ಯಾರೇ ಆಗಲಿ ಬಿಜೆಪಿ ಶಾಸಕ ರಾಮ್ ಕದಂ ಅವರ ನಾಲಿಗೆಯನ್ನು ಕತ್ತರಿಸಿ ತಂದೆರೆ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸುಬೋದ್ ಸಾಹುಜಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ರಾಮ್ ಕದಂ ಅವರಿಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟಿಸ್‌ ನೀಡಿದ್ದು, ಎಂಟು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.