ADVERTISEMENT

ಏಪ್ರಿಲ್ ಫೂಲ್ ನೆಪದಲ್ಲಿ ಕೊರೊನಾ ವದಂತಿ ಹಬ್ಬಿಸಿದರೆ ಕ್ರಮ: ಮಹಾರಾಷ್ಟ್ರ ಪೊಲೀಸ್

ಪಿಟಿಐ
Published 31 ಮಾರ್ಚ್ 2020, 11:23 IST
Last Updated 31 ಮಾರ್ಚ್ 2020, 11:23 IST
ಮಹಾರಾಷ್ಟ್ರ ಪೊಲೀಸ್
ಮಹಾರಾಷ್ಟ್ರ ಪೊಲೀಸ್   

ಮುಂಬೈ:ಏಪ್ರಿಲ್ ಫೂಲ್ ನೆಪದಲ್ಲಿ ಸಾಮಾಜಿಕ ತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ವದಂತಿ ಅಥವಾ ತಮಾಷೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ರೀತಿಯ ವದಂತಿಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದರೆ ಸಂದೇಶ ಕಳುಹಿಸಿದ ವ್ಯಕ್ತಿ, ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಮೀನಾ ಮಕ್ವಾನಾ ಹೇಳಿದ್ದಾರೆ.

ಏಪ್ರಿಲ್ 1ರಂದು ಹಲವಾರು ಜನ ತಮ್ಮ ಸಂಬಂಧಿಕರು, ಸ್ನೇಹಿತರನ್ನು ಮೂರ್ಖರನ್ನಾಗಿ ಮಾಡುವ ಆಟವಾಡುತ್ತಾರೆ. ಯಾರೊಬ್ಬರೂ ಕೊರೊನಾವೈರಸ್‌ಗೆ ಸಂಬಂಧಪಟ್ಟವಿಷಯಗಳ ಬಗ್ಗೆ ತಮಾಷೆ ಮಾಡಬೇಡಿ. ಇಂಥಾ ಸಂದೇಶಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ. ಈ ರೀತಿಯ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಕಂಡು ಬಂದರೆ ಗ್ರೂಪ್ಅಡ್ಮಿನ್ ಮತ್ತು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಗ್ರೂಪ್ ಅಡ್ಮಿನ್‌ಗಳು ಸಂದೇಶ ಕಳುಹಿಸುವ ಸೆಟ್ಟಿಂಗ್ಸ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ ಎಂದು ಮೀನಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.