ADVERTISEMENT

ಬಿಜೆಪಿ ‘ಪ್ಲಾನ್‌ ಬಿ’ನಲ್ಲಿದ್ದರು ಅಜಿತ್ ಪವಾರ್‌!

ಪವಾರ್ ಕುಟುಂಬದ ಒಡಕಿನ ಲಾಭ ಪಡೆದ ಕೇಸರಿ ಪಕ್ಷ l ರಹಸ್ಯ ಕಾರ್ಯಾಚರಣೆಯ ಸಂಪೂರ್ಣ ಅರಿವಿದ್ದ ಶಾ, ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 21:55 IST
Last Updated 23 ನವೆಂಬರ್ 2019, 21:55 IST
ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಜೆಪಿ ಕಾರ್ಯಕರ್ತರು ಮಹಾರಾಷ್ಟ್ರದ ಠಾಣೆಯಲ್ಲಿ ಸಿಹಿಹಂಚಿ ವಿಜಯೋತ್ಸವ ಆಚರಿಸಿದರು - –ಪಿಟಿಐ ಚಿತ್ರ
ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಜೆಪಿ ಕಾರ್ಯಕರ್ತರು ಮಹಾರಾಷ್ಟ್ರದ ಠಾಣೆಯಲ್ಲಿ ಸಿಹಿಹಂಚಿ ವಿಜಯೋತ್ಸವ ಆಚರಿಸಿದರು - –ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಪವಾರ್ ಕುಟುಂಬದ ಒಡಕಿನ ಲಾಭ ಪಡೆದು ರಾತ್ರೋರಾತ್ರಿ ‘ಪ್ಲಾನ್– ಬಿ’ ಜಾರಿ ಗೊಳಿಸಿರುವ ಬಿಜೆಪಿಯು ಶಿವಸೇನಾ–ಕಾಂಗ್ರೆಸ್–ಎನ್‌ಸಿಪಿ ಸರ್ಕಾರ ರಚನೆ ಯತ್ನವನ್ನು ಬುಡಮೇಲು ಮಾಡಿದೆ.

ಮೂರೂ ಪಕ್ಷಗಳು ಸರ್ಕಾರ ರಚನೆಗೆ ಬಿರುಸಿನ ತಯಾರಿ ನಡೆಸುತ್ತಿದ್ದುದನ್ನು ಮೌನವಾಗಿ ಗಮನಿಸುತ್ತಿದ್ದ ಬಿಜೆಪಿ, ಅಜಿತ್ ಪವಾರ್ ಅವರನ್ನು ಒಳಗೊಂಡ ‘ಎರಡನೇ ಆಯ್ಕೆ’ಯನ್ನು ಸಿದ್ಧವಾಗಿಟ್ಟಿತ್ತು. ಶುಕ್ರವಾರ ಸಂಜೆವರೆಗೂ ಮೈತ್ರಿ ಸರ್ಕಾರ ರಚನೆ ಕುರಿತ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿದ್ದ ಅಜಿತ್, ಶನಿವಾರ ಬೆಳಿಗ್ಗೆ ವೇಳೆಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಪವಾರ್ ಕುಟುಂಬದಲ್ಲಿ ಒಡಕಿಗೆ ಕಾರಣವಾಗಿದ್ದವು. ಒಂದು ಕಡೆ ಅಜಿತ್ ಪವಾರ್ ಮತ್ತೊಂದು ಕಡೆ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ನಡುವೆಉತ್ತರಾಧಿಕಾರಕ್ಕಾಗಿ ಪೈಪೋಟಿ ಇತ್ತು ಎಂದು ಮೂಲಗಳು ಹೇಳಿವೆ.

ADVERTISEMENT

ತಮ್ಮ ಪುತ್ರ ಪಾರ್ಥ ಪವಾರ್‌ಗೆ ಮಾವಲ್‌ ಕ್ಷೇತ್ರದ ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಅಜಿತ್ ಆಕ್ರೋಶಗೊಂಡಿದ್ದರು. ಕೊನೆಯ ಹಂತದಲ್ಲಿ ಟಿಕೆಟ್ ಗಿಟ್ಟಿಸಿದ್ದ ಪಾರ್ಥ, ಚುನಾವಣೆಯಲ್ಲಿ ಸೋಲುಂಡಿದ್ದರು. ಮಿಗಿಲಾಗಿ ಶರದ್ ಪವಾರ್ ಅವರ ಮತ್ತೊಬ್ಬ ಸಹೋದರನ ಮೊಮ್ಮಗ ರೋಹಿತ್ ಪವಾರ್ ಚುನಾವಣೆಯಲ್ಲಿ ಗೆದ್ದಿದ್ದರು. ಪಕ್ಷದಲ್ಲಿ ಹೊಸ ತಲೆಮಾರು ಪ್ರವರ್ಧಮಾನಕ್ಕೆ ಬರುತ್ತಿರುವ ಬೆಳವಣಿಗೆಯು ಅಜಿತ್‌ ಅವರಲ್ಲಿ ಅಭದ್ರತೆ ಮೂಡಿಸಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.