ADVERTISEMENT

ಕೋವಿಡ್‌: ಮಹಾರಾಷ್ಟ್ರದಲ್ಲಿ 2 ಹೊಸ ಪ್ರಕರಣ ವರದಿ

ಪಿಟಿಐ
Published 12 ಆಗಸ್ಟ್ 2025, 13:23 IST
Last Updated 12 ಆಗಸ್ಟ್ 2025, 13:23 IST
   

ಮುಂಬೈ: ಮಹಾರಾಷ್ಟ್ರದಲ್ಲಿ ಮಂಗಳವಾರ 2 ಹೊಸ ಕೋವಿಡ್‌ –19 ಪ್ರಕರಣ ವರದಿಯಾಗಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

ಮುಂಬೈ ಹಾಗೂ ನವೀ ಮುಂಬೈನಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

2025ರಲ್ಲಿ ಮಹಾರಾಷ್ಟ್ರದಲ್ಲಿ ಇದುವರೆಗೂ 45,057 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಿದ್ದು, 2,755 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,684 ಜನರು ಗುಣಮುಖರಾಗಿದ್ದು, 44 ಜನರು ಮೃತಪಟ್ಟಿದ್ದಾರೆ ಮಾಹಿತಿ ನೀಡಿದೆ.

ADVERTISEMENT

ಮುಂಬೈನಲ್ಲೇ 1,106 ಕೋವಿಡ್‌ –19 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.