ಮುಂಬೈ: ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ, ಮತದಾರರ ಪಟ್ಟಿಯಲ್ಲಿ ಹೊಸದಾಗಿ 14.71 ಲಕ್ಷ ಮತದಾರರ ಹೆಸರು ಸೇರ್ಪಡೆಯಾಗಿದೆ. 4.09 ಲಕ್ಷ ಹೆಸರು ತೆಗೆದುಹಾಕಲಾಗಿದೆ. ಆದರೆ, ಒಂದೇ ಒಂದು ರಾಜಕೀಯ ಪಕ್ಷ ಇದಕ್ಕೆ ಆಕ್ಷೇಪಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಠಾಣೆಯಲ್ಲಿ ಗರಿಷ್ಠ 2.25 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದ್ದರೆ, 1.82 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿರುವ ಪುಣೆ ನಂತರದ ಸ್ಥಾನದಲ್ಲಿದೆ ಎಂಬುದು ದತ್ತಾಂಶದಿಂದ ತಿಳಿದು ಬರುತ್ತದೆ.
‘ಮತದಾರರ ಪಟ್ಟಿ ತಿರುಚಿರುವ ಕುರಿತ ಆರೋಪಗಳೇ ರಾಜಕೀಯ ಪಕ್ಷಗಳು ನಡೆಸುವ ಚರ್ಚೆಗಳ ಕೇಂದ್ರಬಿಂದುವಾಗಿವೆ. ಆದರೆ, ಮತದಾರರ ಹೆಸರು ಸೇರ್ಪಡೆ ಅಥವಾ ತೆಗೆದುಹಾಕಿರುವ ಕುರಿತಂತೆ ಯಾವುದೇ ಲಿಖಿತ ದೂರು ಅಥವಾ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.