ADVERTISEMENT

ಔರಂಗಾಬಾದ್‌–ಪುಣೆ ನಡುವೆ ₹10,000 ಕೋಟಿ ವೆಚ್ಚದಲ್ಲಿ ಹೆದ್ದಾರಿ: ನಿತಿನ್‌ ಗಡ್ಕರಿ

ಪಿಟಿಐ
Published 24 ಏಪ್ರಿಲ್ 2022, 14:21 IST
Last Updated 24 ಏಪ್ರಿಲ್ 2022, 14:21 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಔರಂಗಾಬಾದ್‌:ಮಹಾರಾಷ್ಟ್ರದ ಔರಂಗಾಬಾದ್‌ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಕ್ಕಾಗಿ ₹10,000 ಕೋಟಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭಾನುವಾರ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ–52ರ 86 ಕಿ.ಮೀ. ಉದ್ದದ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಔರಂಗಾಬಾದ್‌ ಮತ್ತು ಪುಣೆ ನಡುವೆ 225 ಕಿ.ಮೀ. ಅಂತರವಿದೆ. ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸುವುದರಿಂದ 140 ಕಿ.ಮೀ.ವೇಗದಲ್ಲಿ ವಾಹನಗಳು ಚಲಿಸಬಹುದು. ಇದರಿಂದ 1.15 ಗಂಟೆ ಸಮಯ ಉಳಿತಾಯ ಆಗುತ್ತದೆ. ಈ ಯೋಜನೆ ಪೈಥನ್‌ ಮತ್ತು ಅಹಮದ್‌ ನಗರ ಪ್ರದೇಶದಿಂದ ಆರಂಭವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಗಡ್ಕರಿ ಅವರು ₹ 2,253 ಕೋಟಿ ವೆಚ್ಚದ ನಾಲ್ಕು ರಸ್ತೆನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.