ADVERTISEMENT

ವಿಜ್ಞಾನಿ, ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್‌ ನರ್ವಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 10 ಮೇ 2021, 2:58 IST
Last Updated 10 ಮೇ 2021, 2:58 IST
ಮಹಾವೀರ್‌ ನರ್ವಾಲ್ (ಚಿತ್ರ ಕೃಪೆ: ಪಿಂಜ್ರಾ ಟಾಡ್‌)
ಮಹಾವೀರ್‌ ನರ್ವಾಲ್ (ಚಿತ್ರ ಕೃಪೆ: ಪಿಂಜ್ರಾ ಟಾಡ್‌)   

ನವದೆಹಲಿ: ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್‌ ನರ್ವಾಲ್ ಅವರು ಭಾನುವಾರ ನಿಧನರಾದರು.

ಮಹಾವೀರ್‌ ನರ್ವಾಲ್ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಮಹಾವೀರ್‌ ನರ್ವಾಲ್‌ ಅವರ ಪುತ್ರ ಆಕಾಶ್‌ ನವಾರ್ಲ್‌ ಅವರಿಗೂ ಕೋವಿಡ್‌ ದೃಢಪಟ್ಟಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪಿಂಜ್ರಾ ಟಾಡ್ಕಾರ್ಯಕರ್ತೆಯಾಗಿರುವ ಮಹಾವೀರ್‌ ಅವರ ಪುತ್ರಿ ನತಾಶಾ ನರ್ವಾಲ್‌ ತಿಹಾರ್‌ ಜೈಲಿನಲ್ಲಿದ್ದಾರೆ. ಮಹಾವೀರ್‌ ಅವರಿಗೆ ಕೊನೆಯಲ್ಲಿ ಮಗಳೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನತಾಶಾನರ್ವಾಲ್‌ ಅವರನ್ನು ಬಂಧಿಸಿ ತಿಹಾರ್‌ ಜೈಲಿನಲ್ಲಿ ಇಡಲಾಗಿದೆ. ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಮಹಾವೀರ್ ನರ್ವಾಲ್‌ ಅವರ ಸಾವಿಗೆ ವಿವಿಧರಾಜಕೀಯ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.