ADVERTISEMENT

ಐಎಸ್‌ ಸೇರಿದ್ದ ಉಗ್ರ ಈ ಹಿಂದೆಯೇ ಸತ್ತಿದ್ದ: ಕೇರಳ ಪೊಲೀಸ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 16:29 IST
Last Updated 11 ಮಾರ್ಚ್ 2022, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಐಎಸ್‌ ಉಗ್ರ ಸಂಘಟನೆ ಪರ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಯುವಕ ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದಾನೆ ಎಂಬ ವರದಿಗಳ ಬೆನ್ನಲ್ಲೇ, ಈ ಯುವಕ ಈ ಮುಂಚಿತವಾಗಿಯೇ ಹತ್ಯೆಗೀಡಾಗಿದ್ದಾನೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ.

ಐಎಸ್‌ ಪರ ಕೆಲಸ ಮಾಡುತ್ತಿದ್ದ ನಜೀಬ್ ಅಲಿ(23) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಖೊರಾಸನ್ ಪ್ರಾಂತ್ಯದ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಮಲಪ್ಪುರಂ ಜಿಲ್ಲೆಯ ಈ ಯುವಕ 2017ರಲ್ಲೇ ಅಫ್ಗಾನಿಸ್ತಾನಕ್ಕೆ ಹೋಗಿ ಐಎಸ್‌ ಸೇರಿದ್ದ. ಅಲ್ಲದೆ ಈ ಮುಂಚಿತವಾಗಿಯೇ ಆತ ಸಾವನ್ನಪ್ಪಿದ್ದ. ಜತೆಗೆ ಕೇರಳ ಮೂಲದ ಮಹಿಳೆ ಮತ್ತು ಪುರುಷರು ಸೇರಿ 100ಕ್ಕೂ ಹೆಚ್ಚು ಯುವಕರು ಐಎಸ್ ಉಗ್ರ ಸಂಘಟನೆ ಸೇರಿದ್ದು, ಇದರಲ್ಲಿ ಹಲವರು ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT