ADVERTISEMENT

ಆರ್ಥರ್ ರಸ್ತೆಯ ಜೈಲು ಸಿದ್ಧ

ಪಿಟಿಐ
Published 11 ಡಿಸೆಂಬರ್ 2018, 6:30 IST
Last Updated 11 ಡಿಸೆಂಬರ್ 2018, 6:30 IST
ಆರ್ಥರ್ ರಸ್ತೆಯ ಜೈಲು
ಆರ್ಥರ್ ರಸ್ತೆಯ ಜೈಲು    

ಮುಂಬೈ: ಉದ್ಯಮಿ ವಿಜಯ ಮಲ್ಯ ಅವರ ಹಸ್ತಾಂತರಕ್ಕೆ ಬ್ರಿಟನ್‌ ಕೋರ್ಟ್ ಅನುಮತಿ ನೀಡಿದಲ್ಲಿ, ಅವರನ್ನು ಭಾರತಕ್ಕೆ ಕರೆತಂದು ಇರಿಸಲು ಉದ್ದೇಶಿಸಿರುವ ಇಲ್ಲಿನ ಆರ್ಥರ್ ರಸ್ತೆಯ ಜೈಲಿನ ಕೋಣೆಯನ್ನು ಕಾರಾಗೃಹದ ಅಧಿಕಾರಿಗಳು ಸಿದ್ಧಗೊಳಿಸಿದ್ದಾರೆ.

ಕಾರಾಗೃಹದ ಒಳಗಡೆ ಎರಡು ಅಂತಸ್ತಿನ ಕಟ್ಟಡದ ಅತ್ಯಂತ ಬಿಗಿಭದ್ರತೆಯ ಬ್ಯಾರಕ್ ಅನ್ನು ಮಲ್ಯ ಅವರಿಗೆ ಮೀಸಲಿರಿಸಲಾಗಿದೆ. ಇದೇ ಕಟ್ಟಡದಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಇರಿಸಲಾಗಿತ್ತು.

‘ಒಂದು ವೇಳೆ ಈ ಕಾರಾಗೃಹಕ್ಕೆ ಕಳುಹಿಸಿದ್ದಲ್ಲಿ, ಮಲ್ಯ ಅವರ ರಕ್ಷಣೆ ಹಾಗೂ ಭದ್ರತೆಯ ಜವಾಬ್ದಾರಿ ನಿಭಾಯಿಸಲು ಸನ್ನದ್ಧರಾಗಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ಮಲ್ಯ ಅವರು ಅನಾರೋಗ್ಯಕ್ಕೆ ತುತ್ತಾದರೆ ಬ್ಯಾರಕ್‌ನ ಸಮೀಪದಲ್ಲೇ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು.ಉಳಿದ ಬ್ಯಾರಕ್‌ಗಳಿಂದ ಇದು ಪ್ರತ್ಯೇಕವಾಗಿದ್ದು ಸಿಸಿಟಿವಿ ಕಣ್ಗಾವಲಿನಲ್ಲಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವ ಸಿಬ್ಬಂದಿ ಇದರ ಕಾವಲಿಗಿದ್ದಾರೆ’ ಎಂದು ಹೇಳಿದ್ದಾರೆ.

ಬ್ರಿಟನ್‌ ಕೋರ್ಟ್ ಆದೇಶದ ಮೇರೆಗೆ ಮಲ್ಯ ಅವರನ್ನು ಇರಿಸಲು ನಿಗದಿಪಡಿಸಿದ್ದ ಬ್ಯಾರಕ್‌ನ ವಿಡಿಯೊವನ್ನು ಕಳುಹಿಸಲಾಗಿತ್ತು. ಜೈಲಿನ ಸೌಲಭ್ಯ ಹಾಗೂ ಸುರಕ್ಷತೆ ಬಗ್ಗೆ ಭಾರತ ಸರ್ಕಾರವು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.