ADVERTISEMENT

ಎನ್‌ಪಿಆರ್‌ ಸಭೆಯಲ್ಲಿ ಭಾಗವಹಿಸುವುದಿಲ್ಲ: ಮಮತಾ

ಪಿಟಿಐ
Published 15 ಜನವರಿ 2020, 20:01 IST
Last Updated 15 ಜನವರಿ 2020, 20:01 IST

ಕೋಲ್ಕತ್ತ : ’ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಕುರಿತು ನವದೆಹಲಿಯಲ್ಲಿ ಜನವರಿ 17ರಂದು ಕೇಂದ್ರ ಸರ್ಕಾರ ಕರೆದಿರುವ ಸಭೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಯಾವುದೇ ಪ್ರತಿನಿಧಿ ಪಾಲ್ಗೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

’ಕೇಂದ್ರ ಸರ್ಕಾರ ಸೂಚನೆ ಪಾಲಿಸದಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ಧೈರ್ಯವನ್ನು ರಾಜ್ಯಪಾಲರು ತೋರಲಿ. ಆದರೆ, ನಾನು ಸಿಎಎ–ಎನ್‌ಪಿಆರ್‌–ಎನ್‌ಆರ್‌ಸಿಗೆ ಅವಕಾಶ ನೀಡುವುದಿಲ್ಲ‘ ಎಂದು ಬುಧವಾರ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT