ADVERTISEMENT

ಎಂಎನ್‌ಎಸ್ ನಾಯಕನ ಕೊಲೆ ಆರೋಪಿ ಬಂಧನ

ಪಿಟಿಐ
Published 3 ಏಪ್ರಿಲ್ 2021, 12:19 IST
Last Updated 3 ಏಪ್ರಿಲ್ 2021, 12:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: 2020ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್‌) ನಾಯಕರೊಬ್ಬರನ್ನು ಕೊಲೆ ಮಾಡಿದ ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

202ರ ನ. 23ರಂದು ಠಾಣೆ ಜಿಲ್ಲೆಯಲ್ಲಿ ಎಂಎನ್‌ಎಸ್‌ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ಜಮೀಲ್ ಅಹಮ್ಮದ್ ಶೇಖ್ ಅವರನ್ನು ಕೊಲೆ ಮಾಡಲಾಗಿತ್ತು.

‘ಎನ್‌ಸಿಪಿ ಮುಖಂಡರ ಸೂಚನೆಯ ಮೇರೆಗೆ ಜಮೀಲ್‌ನನ್ನು ಕೊಲೆ ಮಾಡಿದೆ ಎಂದು ಆರೋ‍ಪಿ ಇರ್ಫಾನ್ ಸೋನು ಶೇಖ್ ಮನ್ಸೂರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ’ ಎಂದು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್) ತಿಳಿಸಿದೆ.

ADVERTISEMENT

‘ಖಚಿತ ಸುಳಿವಿನ ಆಧಾರದ ಮೇರೆಗೆ ಮನ್ಸೂರಿಯನ್ನು ಕಥೌಟ ಕೆರೆಯ ಬಳಿ ಬಂಧಿಸಲಾಗಿದೆ. ಜಮೀಲ್‌ನನ್ನು ಕೊಂದಿದ್ದಕ್ಕೆ ಒಸಾಮ ಎನ್ನುವ ವ್ಯಕ್ತಿಯು ನನಗೆ ₹ 2 ಲಕ್ಷ ನೀಡಿದ್ದ’ ಎಂದೂ ಆರೋಪಿ ಮನ್ಸೂರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ

ಗೋರಖ್‌ಪುರದ ನಿವಾಸಿಯಾಗಿರುವ ಮನ್ಸೂರಿಯನ್ನು ಮಹಾರಾಷ್ಟ್ರ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಎಸ್‌ಟಿಎಫ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.