ADVERTISEMENT

ಕೋವಿಡ್ ಜಾಗೃತಿ ಗಾಳಿಪಟ ತಯಾರಿಸಿದ ವ್ಯಕ್ತಿ, ಚೀನಾದ ಮಾಂಜಾ ಬಹಿಷ್ಕರಿಸಲು ಕರೆ

ಏಜೆನ್ಸೀಸ್
Published 13 ಆಗಸ್ಟ್ 2020, 7:40 IST
Last Updated 13 ಆಗಸ್ಟ್ 2020, 7:40 IST
ಕೋವಿಡ್ ಜಾಗೃತಿ ಮೂಡಿಸುವ ಗಾಳಿಪಟ
ಕೋವಿಡ್ ಜಾಗೃತಿ ಮೂಡಿಸುವ ಗಾಳಿಪಟ    

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕು ಬಗ್ಗೆ ಜಾಗೃತಿ ಮೂಡಿಸಲುದೆಹಲಿಯ ಮೊಹಮ್ಮದ್ ತಾಖಿ ಎಂಬ ವ್ಯಕ್ತಿ 'ಕೋವಿಡ್ ಜಾಗೃತಿ' ಗಾಳಿಪಟಗಳನ್ನು ತಯಾರಿಸಿದ್ದಾರೆ.

ಕೋವಿಡ್‌ನಿಂದ ನಾವು ಸುರಕ್ಷಿತರಾಗಿರಬೇಕು. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಗಾಳಿಪಟ ಹಾರಿಸುವುದಕ್ಕೆ ಚೀನಾದ ಮಾಂಜಾ ಖರೀದಿ ಮಾಡಬೇಡಿ ಎಂದು ಗಾಳಿಪಟದಲ್ಲಿ ಸಂದೇಶವನ್ನು ಪ್ರಿಂಟ್ ಮಾಡಿಸಿದ್ದಾರೆ.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಮೊಹಮ್ಮದ್ ತಾಖಿ, ನಾವು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದೇವೆ. ಕೋವಿಡ್-19ನ್ನು ದೇಶದಿಂದ ಹೊರಗೋಡಿಸಲುಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

ADVERTISEMENT

ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ, ಪ್ರತಿ ಬಾರಿಯೂ ಕೈಗಳಿಗೆ ಸ್ಯಾನಿಟೈಜರ್ ಬಳಸಿ ಎಂಬ ಸಂದೇಶವಿರುವ ವಿವಿಧ ರೀತಿಯ ಗಾಳಿಪಟಗಳನ್ನು ತಾಖಿ ತಯಾರಿಸಿದ್ದಾರೆ.

ಪ್ರತಿ ವರ್ಷ ಸ್ವಾತಂತ್ರ್ಯೋತ್ಸವಕ್ಕೆ ವಿವಿಧ ಸಂದೇಶಗಳಿರುವ ಗಾಳಿಪಟಗಳನ್ನು ತಯಾರಿಸುತ್ತೇನೆ. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ ಎಂದಿದ್ದಾರೆ ಮೊಹಮ್ಮದ್ ತಾಖಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.