ADVERTISEMENT

ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ

ಪಿಟಿಐ
Published 26 ಡಿಸೆಂಬರ್ 2021, 13:00 IST
Last Updated 26 ಡಿಸೆಂಬರ್ 2021, 13:00 IST
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಂಡಲ ಪೂಜೆ ನೆರವೇರಿಸಲು ಬಂದಿದ್ದ ಭಕ್ತರು –ಪಿಟಿಐ ಚಿತ್ರ
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಂಡಲ ಪೂಜೆ ನೆರವೇರಿಸಲು ಬಂದಿದ್ದ ಭಕ್ತರು –ಪಿಟಿಐ ಚಿತ್ರ   

ಶಬರಿಮಲೆ, ಕೇರಳ: ನಲ್ವತ್ತೊಂದು ದಿನಗಳ ಮೊದಲ ಹಂತದ ಶಬರಿಮಲೆ ಯಾತ್ರೆಯ ಕೊನೆಯ ಕಾರ್ಯಕ್ರಮವಾದ ಮಂಡಳ ಪೂಜೆಯನ್ನು ಭಾನುವಾರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೋವಿಡ್‌ ಮಾರ್ಗಸೂಚಿಗಳನ್ವಯ ಆರಂಭವಾದ ಪೂಜೆಯಲ್ಲಿ ಭಾಗವಹಿಸಿದ್ದ ಸೀಮಿತ ಸಂಖ್ಯೆಯ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಘೋಷಣೆಗಳನ್ನು ಕೂಗಿದರು. ಕಲಭ ಅಭಿಷೇಕ ಮತ್ತು ಕಲಶ ಅಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳಿಗೆ ಜನರು ಸಾಕ್ಷಿಯಾದರು. ಈ ವೇಳೆ ಅಯ್ಯಪ್ಪ ಸ್ವಾಮಿಯ ಸ್ವರ್ಣ ವೇಷಭೂಷಣಗಳ ಅಲಂಕಾರವಾದ ತಂಗ ಅಂಗಿಯನ್ನು ಕಣ್ತುಂಬಿಕೊಂಡರು. ಅರನ್ಮುಳದ ಶ್ರೀ ಪಾರ್ಥಸಾರಥಿ ದೇವಸ್ಥಾನದಿಂದ ತಂಗ ಅಂಗಿಯನ್ನು ಶನಿವಾರ ಸಂಜೆ ಮೆರವಣಿಗೆಯ ಮೂಲಕ ಇಲ್ಲಿಗೆ ತರಲಾಗಿತ್ತು.

ಜನವರಿ 14ರ ಮಕರ ಸಂಕ್ರಾತಿ ನಿಮಿತ್ತ ದೇವಸ್ಥಾನವು ಡಿಸೆಂಬರ್‌ 30ರಂದು ಪುನಃ ತೆರೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.