ADVERTISEMENT

#MeToo ಪ್ರಕರಣಗಳ ತನಿಖೆಗೆ ಸಮಿತಿ ರೂಪಿಸಲು ಮೇನಕಾ ಗಾಂಧಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 12:53 IST
Last Updated 12 ಅಕ್ಟೋಬರ್ 2018, 12:53 IST
   

ನವದೆಹಲಿ: ಲೈಂಗಿಕ ಕಿರುಕುಳ ಬಗ್ಗೆ ದೂರು ನೀಡಿರುವ ಎಲ್ಲ ಮಹಿಳೆಯರನ್ನು ನಾನು ನಂಬುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾಗಾಂಧಿ ಹೇಳಿದ್ದಾರೆ.

ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹಿರಿಯನ್ಯಾಯಮೂರ್ತಿಗಳ ಸಮಿತಿಯೊಂದನ್ನು ರೂಪಿಸುವುದಕ್ಕೆ ತಮ್ಮ ಸಚಿವಾಲಯ ಪ್ರಸ್ತಾಪ ಮಾಡಿದೆ ಎಂದು ಅವರು ಹೇಳಿದ್ದಾರೆ.

'ನಾನು ಅವರೆಲ್ಲರನ್ನೂ ನಂಬುತ್ತೇನೆ. ಪ್ರತಿ ದೂರಿನ ಹಿಂದಿರುವ ನೋವು, ಆಘಾತವನ್ನು ನಾನು ನಂಬುತ್ತೇನೆ. ಮೀಟೂ ಅಭಿಯಾನದ ಮೂಲಕ ಬಹಿರಂಗವಾದ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗದ ಹಿರಿಯ ಸದಸ್ಯರ ಸಮಿತಿಯೊಂದನ್ನು ರೂಪಿಸಲು ನಾನು ಪ್ರಸ್ತಾಪ ಮಾಡುತ್ತಿದ್ದೇನೆ' ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಚಿವೆ ಹೇಳಿದ್ದಾರೆ.ಆ ಸಮಿತಿ ಲೈಂಗಿಕ ಕಿರುಕುಳ ಪ್ರಕರಣವನ್ನು ಕಾನೂನು ಮತ್ತು ಸಂಸ್ಥೆಯ ಚೌಕಟ್ಟಿನೊಳಗೆ ತನಿಖೆ ನಡೆಸುವುದು ಎಂದಿದ್ದಾರೆ ಮೇನಕಾ.
ಸಹೋದ್ಯೋಗಿಗಳಿಂದ, ಬಾಸ್‍ಗಳಿಂದ ಲೈಂಗಿಕ ಕಿರುಕುಳ ಅನುಭವಿಸಿದ ಮಹಿಳೆಯರು #MeToo ಅಭಿಯಾನದ ಮೂಲಕ ಶೋಷಣೆಯ ಕತೆ ತೆರೆದಿಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.