
ಪಿಟಿಐ
ಬಂಧನ (ಸಾಂದರ್ಭಿಕ ಚಿತ್ರ)
ಇಂಫಾಲ್: ‘ಮಣಿಪುರದಲ್ಲಿ ನಡೆಯುತ್ತಿರುವ ‘ಸಂಗಾಯ್ ಪ್ರವಾಸ ಹಬ್ಬ’ದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ ಮಹಿಳೆ ಸೇರಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ’ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದರು.
‘ಫೇಸ್‌ಬುಕ್ ಖಾತೆಯೊಂದರಿಂದ ನ.21ರಂದು ಬೆದರಿಕೆಯ ವಿಡಿಯೊ ಹಂಚಿಕೆಯಾಗಿತ್ತು. ಬಳಿಕ ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್‌ನವರು ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ ನಿಷೇಧಿತ ಕೆಸಿಪಿ (ಎಂಎಫ್‌ಎಲ್) ಸಂಘಟನೆಯ ಈ ಮೂವರನ್ನು ಬಂಧಿಸಿದ್ದಾರೆ’ ಎಂದರು.
ನ.21ರಿಂದ ನ.30ರವರೆಗೆ ಈ ಹಬ್ಬ ನಡೆಯಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ನಿರಾಶ್ರಿತರಾದವರು ಮತ್ತು ಕೆಲವು ಸಂಘಟನೆಗಳು ಈ ಹಬ್ಬವನ್ನು ಬಹಿಷ್ಕರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.