ADVERTISEMENT

ಸರ್ಕಾರಿ ನೌಕರರಿಗೆ ದುಡಿಯದಿದ್ದರೆ ವೇತನವಿಲ್ಲ: ನಿಯಮ ಜಾರಿಗೊಳಿಸಲು ಮಂದಾದ ಮಣಿಪುರ

ಪಿಟಿಐ
Published 27 ಜೂನ್ 2023, 6:44 IST
Last Updated 27 ಜೂನ್ 2023, 6:44 IST
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್    

ಇಂಪಾಲ: ಸರ್ಕಾರಿ ನೌಕರರಿಗೆ ‘ಕೆಲಸ ಮಾಡದಿದ್ದರೇ ವೇತನವಿಲ್ಲ‘ ಎಂಬ ನಿಯಮವನ್ನು ಜಾರಿಗೆ ತರಲು ಮಣಿಪುರ ಸರ್ಕಾರ ನಿರ್ಧರಿಸಿದೆ. 

ಈ ಬಗ್ಗೆ ಸರ್ಕಾರದ ಆಡಳಿತಾತ್ಮಕ ಇಲಾಖೆ ಅದೇಶ ಹೊರಡಿಸಿದೆ. 

ನೌಕರರು ಅಧಿಕೃತ ರಜೆ ಇಲ್ಲದೇ ಗೈರಾಗುವವರಿಗೆ ಈ ನಿಯಮ ಅನ್ವಯವಾಗಲಿದೆ. ಅಂತಹವರಿಗೆ ವೇತನ ನೀಡುವುದಿಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮಣಿಪುರ ಸರ್ಕಾರವು ಒಂದು ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.