ADVERTISEMENT

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ: ಕುಕಿ ಸಮುದಾಯದ ವಿರೋಧ

ಭೂಪರಿಹಾರ, ಮಾತುಕತೆ ನಿರಾಕರಿಸಿ ಅಸಹಕಾರ

ಪಿಟಿಐ
Published 29 ಸೆಪ್ಟೆಂಬರ್ 2025, 16:11 IST
Last Updated 29 ಸೆಪ್ಟೆಂಬರ್ 2025, 16:11 IST
.
.   

ಇಂಫಾಲ್‌: ಭಾರತ– ಮ್ಯಾನ್ಮಾರ್‌ ಗಡಿಯಲ್ಲಿ ಅಳವಡಿಸುತ್ತಿರುವ ತಂತಿ ಬೇಲಿಗೆ 16 ಹಳ್ಳಿಗಳ ಕುಕಿ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸೂಕ್ತ ಸ್ಪಂದನ ಸಿಗುವವರೆಗೂ ‘ಅಸಹಕಾರ’ ನಿಲುವು ತಳೆಯುವುದಾಗಿ ಘೋಷಿಸಿದ್ದಾರೆ.

ಕುಕಿ–ಜೋ ಜನರ ರಾಜಕೀಯ ಬೇಡಿಕೆ ಈಡೇರಿಸುವ ತನಕ ಸಕಲ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂದು ಗಡಿ ಗ್ರಾಮಗಳ ಕುಕಿ ಮುಖಂಡರು ಆಗ್ರಹಿಸಿದ್ದಾರೆ.

ಗಡಿಯ 16 ಕಿ.ಮೀ. ವ್ಯಾಪ್ತಿಯಲ್ಲಿ ನೆಲಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ಯಾವುದೇ ದಾಖಲೆಗಳಿಲ್ಲದೆ ಮುಕ್ತವಾಗಿ ಸಂಚರಿಸುವುದನ್ನು (ಎಫ್ಎಂಆರ್) ರದ್ದುಗೊಳಿಸುವ ಪ್ರಸ್ತಾವ ವಿರೋಧಿಸಿ ರ‍್ಯಾಲಿ ನಡೆಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ನೀಡಲಾಗಿದೆ ಎಂದು ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕುಕಿ ಜೋ ಜನರ ಹಿತದೃಷ್ಟಿಯಿಂದ ನಮ್ಮ ರಾಜಕೀಯ ಬೇಡಿಕೆ ಈಡೇರುವವರೆಗೆ ಮತ್ತು ರಾಜ್ಯವು ಸಹಜ ಸ್ಥಿತಿಗೆ ಮರಳುವ ತನಕ ಭೂಪರಿಹಾರ ಪಡೆಯಲ್ಲ. ಸರ್ಕಾರದೊಂದಿಗೆ ಮಾತುಕತೆ ನಡೆಸದೆ ಅಸಹಕಾರ ತೋರುತ್ತೇವೆ’ ಎಂದಿದೆ.

ಕುಕಿ ಸಂಘಟನೆಗಳು ಸಮುದಾಯಕ್ಕೆ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುತ್ತಿವೆ. ಮೈತೇಯಿ ಸಮುದಾಯವು ಇದನ್ನು ತೀವ್ರವಾಗಿ ವಿರೋಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.