ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕಂಗಲಾ ಪಟ್‌ನಿಂದ ಯುಪಿಪಿಕೆಯ ಸಕ್ರಿಯ ಕಾರ್ಯಕರ್ತ ಯುಮ್ನಾಮ್ ಪ್ರೇಮ್ ಮೈತೇಯಿ (23) ಎಂಬಾತನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅಂಗಡಿಗಳಲ್ಲಿ ಸುಲಿಗೆ ಹಾಗೂ ಸ್ಥಳೀಯ ನ್ಯಾಯ ಪಂಚಾಯಿತಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದ ನಾನಾವ್ (43) ಎಂಬಾತನನ್ನು ಪೊಲೊ ಮೈದಾನದ ಬಳಿ ಶುಕ್ರವಾರ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯ ಸೆಜಾಂಗ್ ಅವಾಂಗ್ ಲೀಕೈನಲ್ಲಿ ಪ್ರೆಪಾಕ್ ಸಂಘಟನೆಯ ಕಾರ್ಯಕರ್ತನೊಬ್ಬನನ್ನು ಹಾಗೂ ನಾಪೆಟ್ ಗ್ರಾಮದಿಂದ ಪೀಪಲ್ಸ್ ಲಿಬರೇಷನ್ ಆರ್ಮಿಯ ಸದಸ್ಯನೊಬ್ಬನನ್ನು ಭದ್ರತಾ ಪಡೆಗಳು ಶನಿವಾರ ಬಂಧಿಸಿವೆ.
ಚುರಾಚಾಂದಪುರ ಜಿಲ್ಲೆಯ ಲಮ್ಜಾಂಗ್ ಗ್ರಾಮದಿಂದ 32 ಪಿಸ್ತೂಲ್‌ಗಳು, ದೇಶಿ ನಿರ್ಮಿತ 303 ರೈಫಲ್, ಸಿಂಗಲ್ ಬ್ಯಾರೆಲ್ ರೈಫಲ್, ಸುಧಾರಿತ ಶೆಲ್‌ಗಳು, ರಾಕೆಟ್ ಬಾಂಬ್, ಮೂರು ಹ್ಯಾಂಡ್ ಗ್ರೆನೇಡ್ ಹಾಗೂ ಕಾಡತೂಸುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.