ಬಂಧನ
(ಪ್ರಾತಿನಿಧಿಕ ಚಿತ್ರ)
ಇಂಫಾಲ್: ಮೈತೇಯಿ ಸಂಘಟನೆಯ ನಾಯಕರ ಬಂಧನ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ ಅರಂಬಾಯ್ ಟೆಂಗೋಲ್ ಸಂಘಟನೆ ಸದಸ್ಯರೊಬ್ಬರನ್ನು ಬಂಧಿಸಿರುವ ಮಣಿಪುರ ಪೊಲೀಸರು, 19 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇಂಫಾಲ್ ಸೇರಿ ಹಲವು ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ 19 ಮಂದಿಯ ವಿಚಾರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಜೂನ್ 9ರಂದು ಪಶ್ಚಿಮ ಇಂಫಾಲ್‌ನ ಟೆರಾ ಸಪಮ್ ಪ್ರದೇಶದಲ್ಲಿ ರಸ್ತೆ ತಡೆ ತೆರವು ಮಾಡುತ್ತಿದ್ದ ಪೊಲೀಸರ ಮೇಲೆ ಸಂಘಟನೆಯ ರಾಜ್ ಅಲಿಯಾಸ್ ಬೋಯ್ನೋ ಪಾಂಗೈಜಮ್ ಎಂಬುವರು ಪಿಸ್ತೂಲಿನಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ಎಂಟು ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕನನ್ ಸಿಂಗ್ ಸೇರಿ ಐವರ ಬಂಧನ ವಿರೋಧಿಸಿ ಮಣಿಪುರದಲ್ಲಿ ಶನಿವಾರದಿಂದ ಭಾರಿ ಹಿಂಸಾಚಾರ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.