ADVERTISEMENT

ರಾಜ್ಯಸಭೆಗೆ ಮನಮೋಹನ್‌ ಸಿಂಗ್‌ ಅವಿರೋಧ ಆಯ್ಕೆ

ಪಿಟಿಐ
Published 19 ಆಗಸ್ಟ್ 2019, 19:40 IST
Last Updated 19 ಆಗಸ್ಟ್ 2019, 19:40 IST
ಮನಮೋಹನ್‌ ಸಿಂಗ್‌
ಮನಮೋಹನ್‌ ಸಿಂಗ್‌   

ಜೈಪುರ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭೆ ಸದಸ್ಯ ಮದನ್‌ಲಾಲ್‌ ಸೈನಿ ಅವರು ನಿಧನರಾಗಿದ್ದರಿಂದ ಈ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಮನಮೋಹನ್‌ ಸಿಂಗ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ನಾಮಪತ್ರ ಹಿಂತೆಗೆಯುವ ಅವಧಿ ಮುಗಿದ ನಂತರ ವಿಧಾನಸಭೆ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಪ್ರಮಿಲ್‌ ಕುಮಾರ್‌ ಮಾಥೂರ್‌ ಅವರು ಸಿಂಗ್‌ ಆಯ್ಕೆಯನ್ನು ಸೋಮವಾರ ಘೋಷಿಸಿದರು.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಮನಮೋಹನ್‌ ಸಿಂಗ್‌ ಅವರನ್ನು ಅಭಿನಂದಿಸಿದ್ದಾರೆ. 1991 ರಿಂದ 2019ರ ವರೆಗೆ ಮನಮೋಹನ್‌ ಸಿಂಗ್‌ ಅವರು ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತ ಬಂದಿದ್ದರು. 2004 ರಿಂದ 2014ರವರೆಗೆ ಪ್ರಧಾನಿಯಾಗಿದ್ದರು. ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಇದೇ ಜೂನ್‌ 14ಕ್ಕೆ ಮುಗಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.